ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮ ನಿವಾಸಿ, ದಿ. ಅಪ್ಪಯ್ಯಾಚಾರಿ ಅವರ ಪತ್ನಿ, ಶತಾಯುಷಿ ಗಂಗಮ್ಮ (102) ಅವರು ತಾ. 8ರಂದು ನಿಧನರಾದರು. ಕಳೆದ ಮೂರು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಗಂಗಮ್ಮ ಅವರು ಇಂದು ಸಂಜೆ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಮೃತರು ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 9 ರಂದು (ಇಂದು) ಹಾನಗಲ್ಲು ಶೆಟ್ಟಳ್ಳಿಯಲ್ಲಿ ನಡೆಯಲಿದೆ.