ಮಡಿಕೇರಿ, ಮೇ 8: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 19 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಮಡಿಕೇರಿ ತಾಲೂಕಿನಲ್ಲಿ ಚೆಂಬು ಸರಕಾರಿ ಪ್ರೌಢಶಾಲೆ, ಮಕ್ಕಂದೂರು ಸರಕಾರಿ ಪ್ರೌಢಶಾಲೆ, ಗಾಳಿಬೀಡು ಸರಕಾರಿ ಪ್ರೌಢಶಾಲೆ, ಬ್ಲಾಸಂ ಪ್ರೌಢಶಾಲೆ, ಮೂರ್ನಾಡು ಜ್ಞಾನಜ್ಯೋತಿ ಪ್ರೌಢಶಾಲೆ, ಕೊಟ್ಟೂರು ರಾಜರಾಜೇಶ್ವರಿ ಆಂಗ್ಲಮಾಧ್ಯಮ ಶಾಲೆ, ಸಿದ್ದಾಪುರ ಶ್ರೀ ಕೃಷ್ಣ ವಿದ್ಯಾಮಂದಿರ, ಇಕ್ರಾ ಪಬ್ಲಿಕ್ ಶಾಲೆ. ವೀರಾಜಪೇಟೆ ತಾಲೂಕಿನಲ್ಲಿ ಅಮ್ಮತ್ತಿಯ ಗುಡ್ ಶಫರ್ಡ್ ಆಂಗ್ಲ ಮಾಧ್ಯಮ ಶಾಲೆ, ಮತ್ತೂರ್ ಸಾಯಿ ಶಂಕರ ಆಂಗ್ಲ ಮಾಧ್ಯಮ ಶಾಲೆ, ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆ, ವೀರಾಜಪೇಟೆ ಮೌಂಟನ್ವ್ಯೂ ಪ್ರೌಢಶಾಲೆ, ಬಾಳೆಲೆ ಪ್ರತಿಭಾ ಪ್ರೌಢಶಾಲೆ.ಸೋಮವಾರಪೇಟೆಯಲ್ಲಿ ಅಂಕನಳ್ಳಿಯ ಸಂತ ಅನ್ನಮ್ಮ ಪ್ರೌಢಶಾಲೆ, ನೆಲ್ಲಿಹುದಿಕೇರಿ ಆಂಗ್ಲೋ ವರ್ನಾಕುಲರ್ ಪ್ರೌಢಶಾಲೆ, ಕೂಡಿಗೆಯ ಹಿಂದುಳಿದ ವರ್ಗಗಳ ಮೊರಾರ್ಜಿ ವಸತಿ ಶಾಲೆ, ಕುಶಾಲನಗರದ ಫಾತಿಮಾ ಪ್ರೌಢಶಾಲೆ, ಕಿರಿಕೊಡ್ಲಿಯ ಸದಾಶಿವ ಸ್ವಾಮೀಜಿ ಪ್ರೌಢಶಾಲೆ, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಶೇ.100 ಫಲಿತಾಂಶ ಪಡೆದಿದೆ.