ಗುಡ್ಡೆಹೊಸೂರು, ಮೇ 8: ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ವಿಶೇಷ ಮತಗಟ್ಟೆಯನ್ನು ತೆರೆಯಲಾಗಿದೆ.
ಗುಡ್ಡೆಹೊಸೂರು ಶಾಲಾ ಆವರಣದಲ್ಲಿ ಒಟ್ಟು 4 ಮತಗಟ್ಟೆಗಳಿದ್ದು, 700 ಹೊಸ ಮತದಾರರು ಸೇರ್ಪಡೆಗೊಂಡ ಹಿನ್ನೆಲೆ ಮತಗಟ್ಟೆಯನ್ನು ಮದುವೆ ಮನೆ ರೀತಿ ವಿನ್ಯಾಸಗೊಳಿಸಲಾಗಿದೆ.
ದಿಡ್ಡಳ್ಳಿಯಿಂದ ಬಸವನಹಳ್ಳಿಗೆ ಬಂದು ನೆಲೆಸಿದ ಹೆಚ್ಚುವರಿ ಮತದಾರರ ದೃಷ್ಟಿಯಿಂದ ವಿಶೇಷವಾಗಿ ಪರಿಗಣಿಸಲಾಗಿದೆ. ವಿಶೇಷ ಮತಗಟ್ಟೆಯನ್ನು ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ವಿನ್ಯಾಸ ಗೊಳಿಸಲಾಗಿದೆ.
- ಗಣೇಶ್ ಕೊಡೆಕ್ಕಲ್