ಸುಂಟಿಕೊಪ್ಪ, ಮೇ 8: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುದ್ಧ ಪೂರ್ಣಿಮೆ ಅಂಗವಾಗಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು.
ಮಡಿಕೇರಿಯ ಪೇಟೆ ಶ್ರೀ ರಾಮ ಮಂದಿರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಬುದ್ಧ ಪ್ರತಿಷ್ಠಾನದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.
ಭಗವಾನ್ ಬುದ್ಧರಿಗೆ ಜಿಲ್ಲಾ ಬುದ್ಧ ಪ್ರತಿಷ್ಠಾನ ಉಪನ್ಯಾಸಕ ಹೆಚ್.ಪಿ. ಶಿವಕುಮಾರ್ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಹೋಬಳಿ ಅಧ್ಯಕ್ಷ ಸುರೇಶ್ ಮಹೇಶ್ ಜ್ಯೋತಿ ಬೆಳಗಿಸಿದರು. ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕಾಂತ್ ಭಟ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭ ಲಿಶ್ಮಿತ, ವಿಧೀಷಾಬೊದ್ ಪ್ರೀತು ಹಾಗೂ ಮತ್ತಿತರರು ಇದ್ದರು.