ಸೋಮವಾರಪೇಟೆ, ಮೇ 8: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಬಾಲ ಭವನ ಸಮಿತಿ ಆಶ್ರಯದಲ್ಲಿ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಯೋಗ ತರಬೇತಿ ನೀಡಲಾಯಿತು.
ಯೋಗ ಶಿಕ್ಷಕ ರಮೇಶ್ ಅವರು ಯೋಗಾಸನದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ನಿರಂತರ ಯೋಗಾಭ್ಯಾಸ ಆರೋಗ್ಯವನ್ನು ಕಾಪಾಡುವದರೊಂದಿಗೆ, ಮಾನಸಿಕ ಸದೃಢತೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ಶಿಬಿರದಲ್ಲಿ 45 ಮಕ್ಕಳು ಭಾಗವಹಿಸಿದ್ದರು. ತಾ. 15 ರವರೆಗೆ ಶಿಬಿರ ನಡೆಯಲಿದೆ.