ಮಡಿಕೇರಿ, ಮೇ 8: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ 12 ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಕೀಕಣಮಾಡ ತಂಡ 2 ವಿಕೆಟ್ಗೆ 41 ರನ್ ಗಳಿಸಿದರೆ, ಮಾಳೆಯಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿ ಗುರಿ ಸಾಧಿಸಿತು. ಕೀಕಣಮಾಡ ವಿಜಯ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಮಣವಟ್ಟಿರ ತಂಡ 2 ವಿಕೆಟ್ಗೆ 34 ರನ್ ಗಳಿಸಿದರೆ, ಕನ್ನಂಡ ತಂಡ 1 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಮಣವಟ್ಟಿರ ತೇಜ ಪಂದ್ಯಪುರುಷ ಪ್ರಶಸ್ತಿ ಪಡೆದರು.
ಕನ್ನಿಕಂಡ ತಂಡ 5 ವಿಕೆಟ್ಗೆ 65 ರನ್ ಗಳಿಸಿದರೆ, ಕೊಟ್ರಂಗಡ ತಂಡ 4 ವಿಕೆಟ್ಗೆ 41 ರನ್ ಗಳಿಸಿ 24 ರನ್ಗಳ ಅಂತರದಿಂದ ಸೋಲನುಭವಿಸಿತು. ಕೊಟ್ರಂಗಡ ನಿತೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ನಂದಿನೆರವಂಡ ತಂಡ 3 ವಿಕೆಟ್ಗೆ 29 ರನ್ ಗಳಿಸಿದರೆ, ಬೊಟ್ಟೋಳಂಡ ತಂಡ 3 ವಿಕೆಟ್ಗೆ 30 ರನ್ ಗಳಿಸಿ ಗುರಿ ಸಾಧಿಸಿತು. ನಂದಿನೆರವಂಡ ಶರತ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.
ಕುಂಞಂಗಡ ತಂಡ 45 ರನ್ ಗಳಿಸಿದರೆ, ಪಟ್ಟಮಾಡ ತಂಡ 1 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಕೇವಲ 1 ರನ್ಗಳ ಅಂತರದಿಂದ ಸೋಲನುಭವಿಸಿತು. ಪಟ್ಟಮಾಡ ಲಹನ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಬಯವಂಡ ತಂಡ 4 ವಿಕೆಟ್ಗೆ 34 ರನ್ ಗಳಿಸಿದರೆ, ತಂಬುಕುತ್ತಿರ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬಯವಂಡ ಪುನಿತ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಉಳುವಂಗಡ 3 ವಿಕೆಟ್ಗೆ 35 ರನ್ ಗಳಿಸಿದರೆ, ಮುಕ್ಕಾಟಿರ ತಂಡ 2 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಉಳುವಂಗಡ ದೀಕ್ಷಿತ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಕಣ್ಣಚಂಡ ತಂಡ 1 ವಿಕೆಟ್ಗೆ 37 ರನ್ ಗಳಿಸಿದರೆ, ಚೆಟ್ಟಿರ ತಂಡ 5 ವಿಕೆಟ್ಗೆ 19 ರನ್ ಗಳಿಸಿ 18 ರನ್ಗಳ ಅಂತರದಿಂದ ಸೋಲನುಭವಿಸಿತು.
ಮಂಡಿರ ತಂಡ 1 ವಿಕೆಟ್ಗೆ 41 ರನ್ ಗಳಿಸಿದರೆ, ಮಂಡಂಗಡ ತಂಡ 4 ವಿಕೆಟ್ಗೆ 18 ರನ್ ಗಳಿಸಿ 24 ರನ್ಗಳ ಅಂತರದಿಂದ ಸೋಲನುಭವಿಸಿತು. ಮಂಡಂಗಡ ಕುಶಾಲಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಕರಿನೆರವಂಡ ತಂಡ ಯಾವದೇ ವಿಕೆಟ್ ಕಳೆದುಕೊಳ್ಳದೆ 49 ರನ್ ಗಳಿಸಿದರೆ, ತಾತಪಂಡ ತಂಡ 4 ವಿಕೆಟ್ಗೆ 20 ರನ್ ಮಾತ್ರ ಗಳಿಸಿ 30 ರನ್ಗಳ ಅಂತರದಿಂದ ಸೋಲನುಭವಿಸಿತು. ತಾತಪಂಡ ಬೋಪಣ್ಣ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಪಂದ್ಯಂಡ ತಂಡ 5 ವಿಕೆಟ್ಗೆ 18 ರನ್ ಗಳಿಸಿದರೆ, ಪಟ್ಟಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಪಂದ್ಯಂಡ ಸಚಿನ್ ಪಂದ್ಯ ಪುರುಷರಾದರು.