ಮಡಿಕೇರಿ, ಮೇ 8 : ಸುಂಟಿಕೊಪ್ಪದ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ಜೂನಿಯರ್ ಶರೀಅತ್ ಕಾಲೇಜಿನಲ್ಲಿ ಇದೇ ಮೇ 10 ರಂದು 2018-19ನೇ ಸಾಲಿನ ಪ್ರಥಮ ಪಿ.ಯು.ಸಿ. ತರಗತಿಗೆ ಈಗಾಗಲೇ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ ಕಾರ್ಯಕ್ರಮ ನಡೆಯಲಿದೆಯೆಂದು ಶರೀಅತ್ ಕಾಲೇಜಿನ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಎಸ್.ಎಂ.ಎಸ್. ಕಾಲೇಜಿನಲ್ಲಿ ಅಂದು ಬೆಳಗ್ಗೆ 10.30 ಕ್ಕೆ ಪ್ರವೇಶಾತಿ ನಡೆಯಲಿದೆ. ಕಳೆದ 2016-17ನೇ ಸಾಲಿನಲ್ಲಿ ಪ್ರಾರಂಭ ಗೊಂಡ ಸಂಸ್ಥೆಯಲ್ಲಿ 20 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಈ ವರ್ಷ ಸುಮಾರು 33 ವಿದ್ಯಾರ್ಥಿ ಗಳಿಗೆ ಅವಕಾಶವನ್ನು ನೀಡಲಾಗುತ್ತದೆ ಎಂದರು.

ಉತ್ತಮ ಸಾಧನೆ-ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂಸ್ಥೆಯಲ್ಲಿ 6 ವರ್ಷಗಳ ಶಿಕ್ಷಣದ ಕೋರ್ಸ್ ನೀಡಲಾಗುತ್ತಿದ್ದು, ಧಾರ್ಮಿಕ ಉನ್ನತ ಶಿಕ್ಷಣಕ್ಕಾಗಿ ದಕ್ಷಿಣ ಭಾರತದ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾ ಅರೇಬಿಕ್ ಕಾಲೇಜಿನಿಂದ ಫೈಝಿ ಬಿರುದನ್ನು ಹಾಗೂ ಲೌಕಿಕವಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ದಿಂದ ಪದವಿ ಮತ್ತು ಪಿ.ಜಿ. ಪದವಿ ಯನ್ನು ದೊರಕಿಸಿ ಕೊಡಲಾಗುವದು. ಇದರೊಂದಿಗೆ ಕಂಪ್ಯೂಟರ್ ಶಿಕ್ಷಣ, ಕನ್ನಡ, ಅರೆಬಿಕ್, ಉರ್ದು ಮತ್ತು ಇಂಗ್ಲಿಷ್ ಸೇರಿದಂತೆ, ಬಹು ಭಾಷಾ ಪಾಂಡಿತ್ಯ, ಲೇಖನ ಬರವಣಿಗೆ ಕಲೆಯ ತರಬೇತಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ವ್ಯಕ್ತಿಗತ ತರಬೇತಿಯನ್ನು ರಾಜ್ಯ ಮಟ್ಟದ ತರಬೇತು ದಾರರಿಂದ ನೀಡಲಾಗುವ ದೆಂದರು.

ಈ ವರ್ಷ ಕಾಲೇಜಿನಲ್ಲಿ ಹೊಸದಾಗಿ ವಿಶುದ್ಧ ಕುರ್‍ಆನನ್ನು ಸಂಪೂರ್ಣ ಕಂಠಪಾಠ ಮಾಡುವ ಕೋರ್ಸನ್ನು ಪ್ರಾರಂಭಿಸಲಾಗಿದ್ದು, ಐದನೇ ಮತ್ತು ಏಳನೇ ತರಗತಿಯಿಂದ ಶಾಲೆ ಮತ್ತು ಮದರಸಾಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ 9449250453, 9731174458, 7019870361 ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಖಜಾಂಚಿ ಹಾರೂನ್ ಹಾಜಿ, ಸದಸ್ಯರಾದ ಕೆ.ಎಂ. ಬಶೀರ್, ಪಿ.ಎ. ಕೋಯ ಹಾಗೂ ಉಪನ್ಯಾಸಕ ಜಬ್ಬಾರ್ ಹುದವಿ ಉಪಸ್ಥಿತರಿದ್ದರು.