ಸುಂಟಿಕೊಪ್ಪ, ಮೇ 8: ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕೊಡಗಿನ ಅಭಿವೃದ್ಧಿಗೆ ರೂ. 1.5 ಕೋಟಿ ಅನುದಾನ ತಂದಿದ್ದೇನೆ. ಮುಂದೆಯು ಕೊಡಗಿನ ಅಭಿವೃದ್ಧಿಗಾಗಿ ತನಗೆ ಮತ ನೀಡಿ ಗೆಲ್ಲಿಸಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಧಿ ಕೆ.ಪಿ. ಚಂದ್ರಕಲಾ ಹೇಳಿದರು.
ವಾಹನ ಚಾಲಕರ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕÀ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾನಾಡಿದ ಅವರು, ಗುಂಡೂರಾವ್ ಅವಧಿ ನಂತರ ಸುಂಟಿಕೊಪ್ಪ ವಿಭಾಗಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಬಸ್ ನಿಲ್ದಾಣ ಮಾರುಕಟ್ಟೆ ರಸ್ತೆ. ಕೆಲಸ ಆಗಲಿಲ್ಲ ಬದಲಾವಣೆ ಮಾಡಿ ಆಶೀರ್ವದಿಸಿ ಎಂದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ 2 ಕೋಟಿ ಉದ್ಯೋಗ ಸೃಷ್ಟಿಯಿಂದ ಯಾರಿಗೆ ಉದ್ಯೋಗ ಸಿಕ್ಕಿದೆ? ವಿದೇಶ ಬ್ಯಾಂಕಿನಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ರೂ. 15 ಲಕ್ಷ ಹಣ ಹಾಕುವದಾಗಿ ಹೇಳಿ ಯಾರಿಗೆ ಸಿಕ್ಕಿದೆ. ಬ್ಯಾಂಕಿನಿಂದ ಸಾಲ ತೆಗೆದು ವಂಚಿಸಿದ ನೀರವ್ ಮೋದಿ ಮಲ್ಲಿ ಅವರು ವಿದೇಶಕ್ಕೆ ಹೋಗಲು ಅವಕಾಶ ಮಾಡಿ ಕೊಟ್ಟದ್ದು ಯಾರು? ಕಾಂಗ್ರೆಸ್ ಸರಕಾರ ಸಿದ್ದರಾಮಯ್ಯ ನುಡಿದಂತೆ ನಡೆದ ಸರಕಾರ ಎಂದು ಹೇಳಿದರು. ಗುಡ್ಡೆಹೊಸೂರು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಸಿದ್ದರಾಮಯ್ಯ ಸರಕಾರ ಪ್ರಣಾಳಿಕೆಯಲ್ಲಿನ ಶೇ. 80 ರಷ್ಟು ಆಶ್ವಾಸನೆ ಈಡೇರಿಸಿ ಜನರ ಬದುಕಿಗೆ ಆಸರೆ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದ ಬಡವರಿಗೆ ತೊಂದರೆಯಾಗಿದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಘೋಷಣೆ ಪೊಳ್ಳು ಘೋಷಣೆ ಯಾಗಿದೆ ಎಂದು ಟೀಕಿಸಿದರು. ಸುಂಟಿಕೊಪ್ಪ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ. ವಸಂತ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಉಸ್ಮಾನ್, ಚಿತ್ರನಟ ಜೈಜಗದೀಶ್ ಮಾತನಾಡಿದರು. ಪಿ.ಎಫ್. ಸಬಾಸ್ಟಿನ್ ಗ್ರಾ.ಪಂ. ಸದಸ್ಯ ರಜಾಕ್, ತಾ.ಪಂ. ಮಾಜಿ ಉಪಾಧ್ಯಕ್ಷ ಮಿಟ್ಟು ಪೆಮ್ಮಯ್ಯ, ಕಾಂಗ್ರೆಸ್ ನಗರ ಅಧ್ಯಕ್ಷ ಎಂ.ಎಸ್. ರವಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.