ಕೂಡಿಗೆ, ಮೇ 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡ ಎಸ್.ಎನ್ .ರಾಜಾರಾವ್ ಅವರ ನೇತೃತ್ವದಲ್ಲಿ ಕೂಡಿಗೆ, ಹೆಗ್ಗಡಳ್ಳಿ, ಮಲ್ಲೇನಹಳ್ಳಿ, ಸೀಗೆಹೊಸೂರು ವ್ಯಾಪ್ತಿಗಳಲ್ಲಿ ಕಾರ್ಯಕರ್ತರನ್ನೊಳಗೊಂಡಂತೆ ಮನೆ ಮನೆಗೆ ಭೇಟಿ ನೀಡಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರಿಗೆ ಮತ ನೀಡುವಂತೆ ಕರಪತ್ರ ಹಂಚಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ವೈ.ರವಿ, ರಾಮಚಂದ್ರ, ಕೂಡುಮಂಗಳೂರು ಸಹಕಾರ ಬ್ಯಾಂಕಿನ ಕೆ.ಕೆ. ಹೇಮಂತ್ಕುಮಾರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.