ಕುಶಾಲನಗರ, ಮೇ 9: ಪ್ರಧಾನಿ ನರೇಂದ್ರ ಮೋದಿಯ ಜನಪರ ಯೋಜನೆಗಳಿಂದÀ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಪುತ್ರ ವಿಕ್ರಂ ಅಪ್ಪಚ್ಚು ಆಶಯ ವ್ಯಕ್ತಪಡಿಸಿದ್ದಾರೆ.
ತಮ್ಮ ತಂದೆಯ ಪರವಾಗಿ ಕುಶಾಲನಗರದ ಹೆಚ್‍ಆರ್‍ಪಿ ಕಾಲನಿಯಲ್ಲಿ ಮತಯಾಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬದಲಾವಣೆಯ ಬಯಸಿರುವ ಜನತೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆ ಹಾಗೂ ಜಿಲ್ಲೆಯಲ್ಲಿ ಕೈಗೊಂಡ ಅಭಿವೃಧ್ದಿ ಕಾರ್ಯಗಳು ಬಿಜೆಪಿಗೆ ವರದಾನವಾಗಲಿದೆ ಎಂದರು.
ಈ ಸಂದರ್ಭ ಅಭ್ಯರ್ಥಿ ರಂಜನ್ ಅಳಿಯ ಆದಿತ್ಯ, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಕಾರ್ಯದರ್ಶಿ ಶಿವಾಜಿ, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಪುಂಡರೀಕಾಕ್ಷ, ಜಿ.ಎಲ್.ನಾಗರಾಜ್, ನಾರಾಯಣ, ವೈಶಾಖ್, ಪ್ರವೀಣ್, ಆದರ್ಶ್, ನವನೀತ್ ಮತ್ತಿತರರು ಇದ್ದರು.
ಕಾಂಗ್ರೆಸ್ ಮತಬೇಟೆ
ಹಂಡ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಪಿ. ಚಂದ್ರಕಲಾ ಅವರು ಮತಯಾಚನೆಗೆ ಆಗಮಿಸಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಡ್ಲಿ ಗ್ರಾಮದ ವೀರೇಂದ್ರ ಕುಮಾರ್ ಅವರು ವಹಿಸಿದ್ದರು. ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಅವರು ಆಗಮಿಸಿದ್ದರು ಹಾಗೂ ಹಲವಾರು ಕಾಂಗ್ರೆಸ್ ಮುಖಂಡರುಗಳು ಆಗಮಿಸಿ ಮತಯಾಚನೆ ಮಾಡಿದರು.
ಮನೆ ಮನೆ ಪ್ರಚಾರ
ವೀರಾಜಪೇಟೆ: ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ಬೇಕಾಗಿರುವಂತಹ ಅನೇಕ ಯೋಜನೆಗಳನ್ನು ಜಾರಿ ಮಾಡಿ ಜನರ ಮನೆ ಬಾಗಿಲಿಗೆ ತಲುಪುವಂತಹ ಸೌಲಭ್ಯಗಳು ಹಾಗೂ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿರುವದರಿಂದ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಂ.ಎಲ್. ಸೈನುದ್ಧಿನ್ ಹೇಳಿದರು.
ವೀರಾಜಪೇಟೆ ಪಟ್ಟಣದ ನೆಹರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಪರ ಮತಯಾಚನೆ ಮಾಡುವ ಸಂದರ್ಭ ಮಾತನಾಡಿದರು. ಈ ಸಂದರ್ಭ ಎಂ.ಇ. ಸೈಫುದ್ದೀನ್, ಇಸ್ಮಾಯಿಲ್, ಭುವನ್, ವಿನೀಲ್, ಹರಿಣಿ, ಶುಭ, ದಿಲನ್, ಎಂ.ಸಿ. ಧ್ಯಾನ್ ಮುಂತಾದವರಿದ್ದರು.