ಮಡಿಕೇರಿ, ಮೇ 9: ಕೊಡಗಿನ ಯುವ ಮತದಾರರು ಯಾವದೇ ಆಮಿಷಗಳಿಗೆ ಒಳಗಾಗದೆ ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಯುವ ಜೆಡಿಎಸ್ ಪ್ರಮುಖರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಜೆಡಿಎಸ್ ಜಿಲ್ಲಾ ವಕ್ತಾರ ಧನಂಜಯ ಶೆಟ್ಟಿ, ಹಣ, ಮದ್ಯ, ಸೀರೆ, ಚಿನ್ನಾಭರಣಗಳ ಆಮಿಷಕ್ಕೆ ಯಾರು ಒಳಗಾಗದೆ, ನಾಡಿನ ಅಭಿವೃದ್ಧಿಗಾಗಿ ಪ್ರಜ್ಞಾವಂತಿಕೆಯನ್ನು ಮೆರೆದು ಜೆಡಿಎಸ್‍ನ್ನು ಬೆಂಬಲಿಸಿ ಎಂದರು
ನಗರಾಧ್ಯಕ್ಷ ರವಿ, ಕಿರಣ್ ರೈ, ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಪಕ್ಷಗಳು ಜಾತಿ ರಾಜಕೀಯ ಮಾಡುತ್ತಿದ್ದು, ಇದನ್ನು ಖಂಡಿಸುವದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಮರಿ ಗೌಡ, ಬಷೀರ್ ಅಹಮ್ಮದ್, ಶರೀಫ್, ಲೋಹಿತಾಶ್ವ ಉಪಸ್ಥಿತರಿದ್ದರು.