ಕರಿಕೆ, ಮೇ 9: ಕರಿಕೆ ವ್ಯಾಪ್ತಿಯಲ್ಲಿ ಇಬ್ಬರು ಡೆಂಗ್ಯೂಗೆ ತುತ್ತಾಗಿದ್ದಾರೆ. ಕರಿಕೆ ಗ್ರಾಮದ ಚೆತ್ತುಕಾಯ ನಿವಾಸಿ ಕಾರ್ಮಿಕ ಸಿನೋಜ್ ಎಂಬವರು ಡೆಂಗ್ಯೂಗೆ ತುತ್ತಾಗಿ ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಎಳ್ಳುಕೊಚ್ಚಿ ನಿವಾಸಿ ಚಿತ್ರಾಂಗ ಎಂಬ ಯುವಕನಿಗೆ ಕೂಡ ಡೆಂಗ್ಯೂ ಬಾಧಿಸಲ್ಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.