ಮಡಿಕೇರಿ, ಏ. 9: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಮಡ್ಲಂಡ ಸೇರಿದಂತೆ 12 ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಮುಕ್ಕಾಟಿರ (ಬೇತ್ರಿ) ತಂಡ 3 ಓವರ್‍ಗಳಲ್ಲಿ 3 ವಿಕೆಟ್‍ಗೆ 21 ರನ್ ಗಳಿಸಿದರೆ, ಪಚ್ಚಾರಂಡ ತಂಡ 6 ವಿಕೆಟ್‍ಗೆ 18 ರನ್ ಗಳಿಸಿ 3 ರನ್‍ಗಳ ಅಂತರದಿಂದ ಸೋಲನುಭವಿಸಿತು. ಪಚ್ಚಾರಂಡ ಮದನ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು.

ನಡಿಕೇರಿಯಂಡ ತಂಡ 1 ವಿಕೆಟ್‍ಗೆ 26 ರನ್ ಗಳಿಸಿದರೆ, ಓಡಿಯಂಡ ತಂಡ 4 ವಿಕೆಟ್‍ಗೆ 13 ರನ್ ಗಳಿಸಿ 13 ರನ್‍ಗಳ ಅಂತರದಿಂದ ಸೋಲನುಭವಿಸಿತು. ಓಡಿಯಂಡ ಮಂಜು ಪಂದ್ಯಪುರುಷ ಪ್ರಶಸ್ತಿ ಗಳಿಸಿದರು. ಬಲ್ಲಂಡ ತಂಡ 1 ವಿಕೆಟ್‍ಗೆ 25 ರನ್ ಗಳಿಸಿದರೆ, ಅಜ್ಜಿನಂಡ ತಂಡÀ 3 ವಿಕೆಟ್‍ಗೆ 14 ರನ್ ಗಳಿಸಿ 12 ರನ್‍ಗಳ ಅಂತರದಿಂದ ಸೋಲನುಭವಿಸಿತು. ಅಜ್ಜಿನಂಡ ತನುಶ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಕಾಳಚಂಡ ತಂಡ 4 ವಿಕೆಟ್‍ಗೆ 33 ರನ್ ಗಳಿಸಿದರೆ, ದೇಯಂಡ ತಂಡ 1 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕಾಳಚಂಡ ಮಧು ಪಂದ್ಯಪುರುಷ ಪ್ರಶಸ್ತಿ ಪಡೆದರು.

ಆತಿಥೇಯ ಮಡ್ಲಂಡ ತಂಡ 4 ಓವರ್‍ನಲ್ಲಿ 5 ವಿಕೆಟ್‍ಗೆ 40 ರನ್ ಕಲೆ ಹಾಕಿದರೆ, ಮಿನ್ನಂಡ ತಂಡ 4 ವಿಕೆಟ್‍ಗೆ 35 ರನ್ ಗಳಿಸಿ 5 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮಡ್ಲಂಡ ದರ್ಶನ್ 14 ರನ್ ಗಳಿಸಿದರೆ, ಮಿನ್ನಂಡ ಸ್ವರೂಪ್ 13 ರನ್ ಗಳಿಸಿ ಗಮನ ಸೆಳೆದರು. ಮಿನ್ನಂಡ ಪೊನ್ನಣ್ಣ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಚೀಕಂಡ ತಂಡ 2 ವಿಕೆಟ್‍ಗೆ 48 ರನ್ ಗಳಿಸಿದರೆ, ಚೀಯಕಪೂವಂಡ ತಂಡ 1 ವಿಕೆಟ್ ನಷ್ಟದಲ್ಲಿ 52 ರನ್ ಗಳಿಸಿ ಗುರಿ ಸಾಧಿಸಿತು. ಚೀಕಂಡ ತೇಜು 27 ರನ್ ಗಳಿಸಿ ಪಂದ್ಯಪುರುಷ ಪ್ರಶಸ್ತಿ ಪಡೆದರು. ಚೀಯಕಪೂವಂಡ ಅನಿಲ್ 39 ರನ್ ಗಳಿಸಿ ಗಮನ ಸೆಳೆದರು.

ಕುಟ್ಟಂಡ ತಂಡ 5 ವಿಕೆಟ್‍ಗೆ 45 ರನ್ ಗಳಿಸಿದರು. ಮಚ್ಚಮಾಡ ತಂಡ 6 ವಿಕೆಟ್‍ಗೆ 25 ರನ್ ಗಳಿಸಿ 21 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಟ್ಟಂಡ ಸೋಮಣ್ಣ 26 ರನ್ ಗಳಿಸಿದರೆ, ಮಚ್ಚಮಾಡ ದರ್ಶನ್ 11 ರನ್ ಗಳಿಸಿ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಬಾಳೆಯಡ ತಂಡ 3 ವಿಕೆಟ್‍ಗೆ 43 ರನ್ ಗಳಿಸಿದರೆ, ಮೊಣ್ಣಂಡ ತಂಡ 6 ವಿಕೆಟ್‍ಗೆ 20 ರನ್ ಗಳಿಸಿ 23 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಾಳೆಯಡ ಸುತನ್ ಹಾಗೂ ಮೊಣ್ಣಂಡ ಸಂಜು ತಲಾ 13 ರನ್ ಗಳಿಸಿ ಗಮನ ಸೆಳೆದರು. ಮೊಣ್ಣಂಡ ಮನು ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ನಾಮೇರ ತಂಡ ಬಾರದ ಕಾರಣ ನಂದೀರ ತಂಡ ಹಾಗೂ ಕೊಕ್ಕಂಡ ತಂಡ ಬಾರದ ಕಾರಣ ಕೊಟ್ಟಂಗಡ ತಂಡಗಳು ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿದವು.