ಮಡಿಕೇರಿ, ಮೇ 9: ಜಿಲ್ಲೆಯ ವಿವಿಧೆಡೆ ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್. ಅಭ್ಯರ್ಥಿಗಳ ಪರವಾಗಿ ಪಕ್ಷಗಳ ಆಯ ಪ್ರಮುಖರು ಮತಯಾಚನೆ ನಡೆಸಿದರು. ವಿವಿಧ ಮುಖಂಡರು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದರು.ಜೀವಿಜಯ ಗೆಲವಿನ ವಿಶ್ವಾಸ
ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ಈ ಬಾರಿಯ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಡಾ. ಯಾಲದಾಳು ಮನೋಜ್ ಬೋಪಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವಿಜಯ ಅವರ ಗೆಲುವು ನಿಶ್ಚಿತವಾಗಿರುವ ಕಾರಣ ಅಲ್ಪಸಂಖ್ಯಾತರು ಕೂಡ ಗೆಲ್ಲುವ ಅಭ್ಯರ್ಥಿಗೆ ಮತ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕಳೆದ ಬಾರಿ ಗ್ರಾಮೀಣ ಪ್ರದೇಶದ ಮತಗಳನ್ನು ಪಡೆದು ಗೆಲ್ಲುವ ಹಂತದಲ್ಲಿದ್ದ ಜೀವಿಜಯ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಮಡಿಕೇರಿ ನಗರ ಭಾಗದಲ್ಲಿ ಮತಗಳಿಕೆಯಲ್ಲಿ ಹಿನ್ನಡೆಯಾಗಿದ್ದ ಕಾರಣ ಸೋಲಾಯಿತು ಎಂದು ತಿಳಿಸಿದ ಅವರು, ಈ ಬಾರಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಚಾರವನ್ನು ಚುರುಕುಗೊಳಿಸಿದ್ದು, ಅತ್ಯಧಿಕ ಮತಗಳು ಲಭಿಸುವ ವಿಶ್ವಾಸವಿದೆ ಎಂದರು.
ಜೆಡಿಎಸ್ ಪಕ್ಷ ಯಾವದೇ ಕಾರಣಕ್ಕೂ ಜಾತಿ ಆಧಾರದ ರಾಜಕಾರಣ ಮಾಡುವದಿಲ್ಲ, ಜಿಲ್ಲೆಯ ಜನತೆ ಕೂಡ ಜಾತಿ ಆಧಾರಿತ ರಾಜಕಾರಣದಿಂದ ದೂರ ಉಳಿದು ಪ್ರಣಾಳಿಕೆ ಆಧಾರಿತ ರಾಜಕೀಯಕ್ಕೆ ಒತ್ತು ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಅಮೆಮನೆ ಪಾಲಾಕ್ಷ ಮಾತನಾಡಿ, ಗೆದ್ದು ಹೋದ ಜನಪ್ರತಿನಿಧಿಗಳು ತಿರುಗಿಯೂ ನೋಡುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ನೋವಿನ ನುಡಿ ಮತದಾರರಿಂದ ಕೇಳಿ ಬಂದಿದೆ. ಈ ಬಾರಿ ಬದಲಾವಣೆ ತರುವದಕ್ಕಾಗಿ ಜೀವಿಜಯ ಅವರನ್ನು ಬೆಂಬಲಿಸುವದಾಗಿ ಜನ ಭರವಸೆ ನೀಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ತುಂತಜೆ ಗಣೇಶ್, ಕಾರ್ಯದರ್ಶಿ ರಾಜಶೇಖರ್, ಯಾದವ್ ಹಾಗೂ ಕೊತ್ತೋಳಿ ಯಕ್ಷಿತ್ ಉಪಸ್ಥಿತರಿದ್ದರು.
ಸುಂಟಿಕೊಪ್ಪದಲ್ಲಿ ಅಪ್ಪಚ್ಚು ರಂಜನ್ ರೋಡ್ ಶೋ
ಸುಂಟಿಕೊಪ್ಪ: ಇಲ್ಲಿನ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕಾಲ್ನಡಿಗೆಯ ಮೂಲಕ ರೋಡ್ ಶೋ ನಡೆಸಿ ಮತಯಾಚಿಸಿದರು. ಸಮೀಪದ ಗದ್ದೆಹಳ್ಳದಿಂದ ಆರಂಭಗೊಂಡು ಮಾದಾಪುರ ರಸ್ತೆ ಮೂಲಕ ಮತಯಾಚಿಸಿಕೊಂಡು ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಸಭೆ ಏರ್ಪಡಿಸಲಾಗಿತ್ತು.
ನಂತರ ಮಾತನಾಡಿದ ಎಂಎಲ್ ಸಿ ಸುನಿಲ್ ಸುಬ್ರಮಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 5 ವರ್ಷದ ಸಾಧನೆಯೆಂದರೆ, ಭ್ರಷ್ಟಚಾರ, ಲಂಚಗುಳಿತನ, ಉನ್ನತ ಅಧಿಕಾರಿಗಳ ಸಾವು, ಬೆಲೆಬಾಳುವ ವಾಚು ಹಾಕಿಕೊಂಡಿದ್ದು, ಹಿಂದೂಗಳ ಮೇಲೆ ದೌರ್ಜನ್ಯ, ಕೊಡಗಿನ ಇಬ್ಬರು ಶಾಸಕರಿಗೆ ಶಾಸಕರ ಅನುದಾನವನ್ನು ಹೊರತುಪಡಿಸಿದರೆ ಮತ್ಯಾವ ಹಣವನ್ನು ಬಿಡುಗಡೆ ಮಾಡದಿರುವದಾಗಿದೆ. ಇದುವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಧರ್ಮ, ಜಾತಿಯನ್ನು ಒಡೆಯುವ ಕೆಲಸ ಮಾಡಿದೆಯೇ ವಿನಃ ಅಭಿವೃದ್ಧಿ ಕೆಲಸ ನಡೆದಿಲ್ಲ. ಟಿಪ್ಪು ಜಯಂತಿಯ ಹೆಸರಿನಲ್ಲಿ ಶಾಂತಿಯುತವಾದ ಕೊಡಗಿನಲ್ಲಿ ಅರುಣ್ ಮಾಚಯ್ಯ ಗೆಲವು ವಿಶ್ವಾಸ
ಮಡಿಕೇರಿ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಗೆಲುವು ಖಚಿತವೆಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಎಸ್. ರಮಾನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರ ಇದೀಗ ಅರುಣ್ ಮಾಚಯ್ಯ ಅವರ ಆಯ್ಕೆಯನ್ನು ಬಯಸುತ್ತಿದೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಮನ್ನಾ ಮಾಡಿದ ರೈತರ ಸಾಲ ಇನ್ನು ಬಿಡುಗಡೆಯಾಗಿಲ್ಲವೆಂದು ಜನರ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿದ ವಿಶೇಷ ಪ್ಯಾಕೇಜ್‍ನಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿದೆ. ಅನೇಕ ಜನಪರ ಭಾಗ್ಯಗಳ ಮೂಲಕ ಸರ್ಕಾರ ಜನಸಾಮಾನ್ಯರ ಮೆಚ್ಚುಗೆಯನ್ನು ಪಡೆದಿದೆ. ಈ ಎಲ್ಲಾ ಕಾರಣಗಳಿಂದ ಜಿಲ್ಲೆಯ ಜನ ಖಂಡಿತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಕೆ.ಯು. ಹ್ಯಾರೀಸ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ತಲಾ ರೂ. 1.75 ಲಕ್ಷಗಳಂತೆ ಅನುದಾನ ಬಿಡುಗಡೆಯಾಗಿದೆ ಎಂದರು.
ಸಂಸದ ಪ್ರತಾಪಸಿಂಹ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದ ಹ್ಯಾರೀಸ್, ಈ ಬಾರಿ ಜಾತ್ಯತೀತ ಮತಗಳು ವಿಭಜನೆಯಾಗದೆ ಕಾಂಗ್ರೆಸ್ ಪಾಲಾಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ಡಿಸಿಸಿ ಸದಸ್ಯ ಕೆದಂಬಾಡಿ ರಿಷಿ ಮಾತನಾಡಿ, ಸಿ.ಎಸ್. ಅರುಣ್ ಮಾಚಯ್ಯ ಅವರ ಗೆಲುವಿಗಾಗಿ ಯುವ ಪಡೆ ಶ್ರಮಿಸುತ್ತಿದೆ ಎಂದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸುನಿಲ್ ಪತ್ರಾವೋ ಉಪಸ್ಥಿತರಿದ್ದರು.
ಬಿಜೆಪಿ ಅಧರ್ಮದ ರಾಜಕಾರಣ ಆರೋಪ
ಮಡಿಕೇರಿ: ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆÉಯಲ್ಲಿ ಮಾನವೀಯ ನೆಲೆಗಟ್ಟಿನ ಧರ್ಮದ ಹೋರಾಟವನ್ನು ನಡೆಸುತ್ತಿದ್ದು, ಬಿಜೆಪಿ ಅಧರ್ಮದ ಮಾರ್ಗದಲ್ಲಿ ಸಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಾಹಿದ್ ಕೋಮುದಳ್ಳುರಿಗೆ ದಾರಿ ಮಾಡಿಕೊಟ್ಟು ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಜನರೇ ನಿರ್ಧಾರ ಮಾಡಲಿ ಎಂದರು.
ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಂಚಲನ ಕೊಡಗಿಗೆ ಮುಟ್ಟಿದೆ. ಕೊಡಗಿನ ಭದ್ರಕೋಟೆ ಬಿಜೆಪಿ ಈ ಬಾರಿಯೂ ನಮ್ಮ ತೆಕ್ಕೆಗೆ ಬರಲಿದೆ. ನಾವು ಸಂವಿಧಾನ, ಕಾನೂನಿಗೆ ತಲೆ ಬಾಗುವ ಪಕ್ಷದವರಾಗಿದ್ದು, ನಮಗೆ ಶಾಂತಿಯುತ ಸಮಾಜದ ಅವಶ್ಯಕತೆ ಇದೆ ಎಂದರು.
ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮದು ಸಮಪಾಲು ಸಮಬಾಳು ಪಕ್ಷವಾಗಿದ್ದು, ಎಲ್ಲರಿಗೂ ಅನುಕೂಲಕರವಾದ ಸವಲತ್ತುಗಳನ್ನು ನಮ್ಮ ಸರ್ಕಾರ ಇರುವಾಗಲೇ ಜನರಿಗೆ ಕೊಟ್ಟಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಂದ್ಯಾ ಸುರಕ್ಷಾ ಯೋಜನೆ, ಮಕ್ಕಳಿಗೆ ಸೈಕಲ್ ಯೋಜನೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದಾರೆ.ಆದರೆ ಸಿದ್ದರಾಮಯ್ಯ ಅವರು ಲಿಂಗಾಯಿತ-ವೀರಶೈವರ ನಡುವೆ ಬಿರುಕು, ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ, ಹಿಂದೂ ಧರ್ಮವನ್ನು ಅವಮಾನಿಸಿದ್ದು ನೋಡಿದಾಗ ಇಂತಹ ವ್ಯಕ್ತಿಯನ್ನು ಮತ್ತೆ ಅಧಿಕಾರಕ್ಕೆ ತಂದರೆ ಗತಿಯೇನು ಎಂದು ಪ್ರಶ್ನಿಸಿದರು.
ದೇಶದ ಉಳಿವಿಗಾಗಿ, ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಂತಿರುವ ಬಿಜೆಪಿಯನ್ನು ಗೆಲ್ಲಿಸುವದರೊಂದಿಗೆ ಮತ್ತೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವದರೊಂದಿಗೆ ಜನರ ಸಮಸ್ಯೆಗಳನ್ನು ಪರಿಹರಿಸಲು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶಕೊಡುವಂತೆ ಮನವಿ ಮಾಡಿಕೊಂಡರು.
ಮಾಜಿ ತಾ.ಪಂ. ಸದಸ್ಯ ವಿಜಯ, ಹಿರಿಯ ಮುಖಂಡ ಪಿ.ಕೆ. ಶೇಷಪ್ಪ ಮಾತನಾಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭಯಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರುಗಳು ರಾಜ್ಯದಲ್ಲಿ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬ್ಯಾಂಕ್ ಖಾತೆಗಳಲ್ಲಿ ಕನಿಷ್ಟ ಪ್ರಮಾಣದ ಹಣವಿಲ್ಲವೆಂದು ಬಡ ಜನತೆಗೆ ದಂಡ ಹಾಕುವ ಮೂಲಕ ಹಣ ಕಸಿಯುವ ಪ್ರಯತ್ನ ಮಾಡುತ್ತಿದೆ. ಎಟಿಎಂಗಳಲ್ಲಿ ಹಣವೇ ಇಲ್ಲದಾಗಿದೆ ಎಂದು ಆರೋಪಿಸಿದರು.
ಅಮಿತ್ ಷಾ ಅವರ ಚಾಣಾಕ್ಷ್ಯತನ ಕರ್ನಾಟಕದಲ್ಲಿ ನಡೆಯುವದಿಲ್ಲವೆಂದ ಅವರು, ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಕೊಡಗಿನಲ್ಲಿ ಬಿಜೆಪಿ ಈ ಬಾರಿ ಛಿದ್ರ ವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ನಗರಸಭಾ ಮಾಜಿ ಸದಸ್ಯ ಸುನಿಲ್ ನಂಜಪ್ಪ ಹಾಗೂ ಬಷೀರ್ ಉಪಸ್ಥಿತರಿದ್ದರು.
ಬಾಣೆ ಸಮಸ್ಯೆ ನಿವಾರಣೆ ಭರವಸೆ
ಮಡಿಕೇರಿ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದರೆ ಕೊಡಗಿನ ಬಾಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವದಾಗಿ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ವೀರಾಜಪೇಟೆ ಅಭ್ಯರ್ಥಿ ಹೆಚ್.ಡಿ. ಬಸವರಾಜು ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಜಿಲ್ಲೆಯನ್ನು ಪ್ರತಿನಿಧಿಸಿರುವ ಜನಪ್ರತಿನಿಧಿಗಳು ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲವೆಂದು ಆರೋಪಿಸಿದರು. ತಾವು ಶಾಸಕರಾಗಿ ಆಯ್ಕೆಯಾದರೆ ಕಾಡಾನೆ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ತಿಳಿಸಿದರು.
ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವದಾಗಿ ಭರವಸೆ ನೀಡಿದ ಅವರು, ರಾಜಕೀಯ ಪಕ್ಷಗಳು ಮುಂದೆ ಏನು ಮಾಡಲಿದ್ದೇವೆ ಎನ್ನುವದನ್ನು ಜನರಿಗೆ ತಿಳಿಸಬೇಕೇ ಹೊರತು ಪರಸ್ಪರ ಆರೋಪ - ಪ್ರತ್ಯಾರೋಪದಲ್ಲಿ ತೊಡಗಬಾರದು. ದೇಶ ವಿಭಜನೆ ಮಾಡುವದನ್ನು ಬಿಟ್ಟು ಎಲ್ಲರೂ ಕೊಮಾರಪ್ಪ, ಸುಂಟಿಕೊಪ್ಪ ಘಟಕದ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಮುಖಂಡರಾದ ಬಿ.ಕೆ. ಮೋಹನ್, ದಾಸಂಡ ರಮೇಶ್, ಬಿಜು, ರಂಜಿತ್ ಪೂಜಾರಿ, ನಾಗೇಶ್ ಪೂಜಾರಿ, ಧನು ಕಾವೇರಪ್ಪ, ಬಿ.ಕೆ. ಪ್ರಶಾಂತ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಬಿ.ಐ ಭವಾನಿ, ಗೀತಾ ವಿಶ್ವನಾಥ್ ಇತರರು ಇದ್ದರು.
ಕಾಂಗ್ರೆಸ್ ಮತಯಾಚನೆ
ಮಡಿಕೇರಿ: ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಕನಸು ಕಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಎ.ವಿ. ಶಾಲೆ, ಮಹದೇವಪೇಟೆ ರಸ್ತೆ, ಇಂದಿರಾಗಾಂಧಿ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಗೌಳಿಬೀದಿ ಸೇರಿದಂತೆ ವಿವಿಧ ಸೌರ್ಹಾರ್ದತೆಗೆ ಆದ್ಯತೆ ನೀಡಬೇಕೆಂದರು. ರಾಜಕೀಯ ಪಕ್ಷಗಳು ಅಭಿವೃದ್ಧಿ ಕಾರ್ಯವನ್ನು ತಾವೇ ಗುತ್ತಿಗೆ ಪಡೆದಂತೆ ವರ್ತಿಸಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಯ್ಕೆಗೆ ಅವಕಾಶ ನೀಡಬೇಕು. ಪ್ರಚೋದನೆಯನ್ನು ನಿಲ್ಲಿಸಬೇಕು ಎಂದು ಬಸವರಾಜು ಮನವಿ ಮಾಡಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ವಿವೇಕ್ ನಾಯಕ್ ಉಪಸ್ಥಿತರಿದ್ದರು.
ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಆರೋಪ
ನಾಪೆÇೀಕ್ಲು: ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಮುಖಂಡರೊಬ್ಬರು ಈ ಬಗ್ಗೆ ತನ್ನ ಬಳಿ ಹೇಳಿದ್ದಾರೆ. ಮತದಾರರು ಯಾವದೇ ಗೊಂದಲಕ್ಕೆ ಒಳಗಾಗದೆ ಯಾವ ಮಾತಿಗೂ ಕಿವಿಗೊಡದೆ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.ಕುಶಾಲನಗರದಲ್ಲಿ ಜೆ.ಡಿ.ಎಸ್. ಮತಯಾಚನೆಕುಶಾಲನಗರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಬೀವಿಜಯ ಕುಶಾಲನಗರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ಪಟ್ಟಣದ ಸೋಮೇಶ್ವರ ದೇವಾಲಯ ಬಳಿಯಿಂದ ತೆರೆದ ವಾಹನದಲ್ಲಿ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಹೊರಟ ಜೀವಿಜಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಮಾರುಕಟ್ಟೆ ರಸ್ತೆ, ಟೌನ್ ಕಾಲನಿ, ರಥಬೀದಿ, ಬೈಚನಹಳ್ಳಿಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಸಿ.ವಿ. ನಾಗೇಶ್, ವಿ.ಎಸ್. ಆನಂದ ಕುಮಾರ್, ಟಿ.ಆರ್. ಶರವಣ ಕುಮಾರ್, ಎಸ್.ಎನ್. ರಾಜಾರಾವ್, ಹೆಚ್.ಡಿ. ಚಂದ್ರು, ಜಗದೀಶ್ ಮತ್ತಿತರರು ಇದ್ದರು.ಬಡಾವಣೆಗಳಲ್ಲಿ ಚಂದ್ರಕಲಾ ಪರ ಮತಯಾಚಿಸಿದ ಅಬ್ದುಲ್ ರಜಾóಕ್ ಹಾಗೂ ಪದಾಧಿಕಾರಿಗಳು ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಮೂಲಕ ಬದಲಾವಣೆ ನಿಶ್ಚತವೆಂದು ಅಭಿಪ್ರಾಯಪಟ್ಟರು.
ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್ ಮಾತನಾಡಿ, ದಿನದಿಂದ ದಿನಕ್ಕೆ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗುತ್ತಿದ್ದು, ಕೆ.ಪಿ. ಚಂದ್ರಕಲಾ ಅವರ ಗೆಲವು ನಿಶ್ಚಿತವಾಗಿದೆ ಎಂದರು. ಮಡಿಕೇರಿ ಬ್ಲಾಕ್‍ನ ಪದಾಧಿಕಾರಿಗಳು, ನಗರ ಕಾಂಗ್ರೆಸ್ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಹಿಳಾ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಅಳುವಾರದಲ್ಲಿ ಮತಯಾಚನೆ
ಕೂಡಿಗೆ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡ ಚಿಕ್ಕತ್ತೂರು ರಾಮೇಗೌಡ ಅವರ ನೇತೃತ್ವದಲ್ಲಿ ಚಿಕ್ಕಅಳುವಾರ, ಬೈರಪ್ಪನಗುಡಿ ವ್ಯಾಪ್ತಿಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನೊಳಗೊಂಡಂತೆ ಮನೆ ಮನೆಗೆ ಭೇಟಿ ನೀಡಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರಿಗೆ ಮತ ನೀಡುವಂತೆ ಕರಪತ್ರ ಹಂಚಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭ ಜೆಡಿಎಸ್ ಪಕ್ಷದ ಮುಖಂಡರಾದ ಶುಂಠಿ ರಾಮಣ್ಣ, ಕೆ.ಎಸ್. ಕೃಷ್ಣೇಗೌಡ, ಅಳುವಾರ ಬೂತ್ ಸಮಿತಿಯ ಅಧ್ಯಕ್ಷ, ವಿವಿಧ ಘಟಕಗಳು ಪದಾಧಿಕಾರಿಗಳು ಮತಯಾಚನೆಯಲ್ಲಿ ತೊಡಗಿದ್ದರು.