ವೀರಾಜಪೇಟೆ, ಮೇ 10: ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವದು ಖಚಿತವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.
ಕುಂಜಿಲಗೇರಿ ಗ್ರಾಮದ ಗಣಪತಿ ಸೇವಾ ಸಮಿತಿಯ ಸಾರ್ವಜನಿಕ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಚುನಾವಣಾ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕುಂಜಿಲಗೇರಿ ಗ್ರಾಮದ ಪ್ರಮುಖರು, ಪಕ್ಷದ ಕಾರ್ಯಕರ್ತರು ಆದ ಅಪ್ಪನೆರವಂಡ ಸನ್ನು ಕುಶಾಲಪ್ಪ
ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪಂದಿಯಂಡ ರವಿ, ಚೊಟ್ಟೇರ ಮೊಣ್ಣಯ್ಯ, ಕೆ.ರಘು, ಲೋಹಿತಾಶ್ವ ರೈ, ಸಿ.ಕಿಶೋರ್, ಬಾಳೆಕುಟ್ಟಿರ ದಿನ್ನಿ, ಮಹಿಳಾ ಘಟಕದ ಭಾಗ್ಯ, ರೇಣು ಮತ್ತಿತರರು ಉಪಸ್ಥಿತರಿದ್ದರು.