ರಾಮ್ ದೇವ್ ಪುಸ್ತಕ ಪ್ರಕಟಣೆಗೆ ತಡೆ ನವದೆಹಲಿ, ಮೇ 10: ಯೋಗ ಗುರು ಬಾಬಾ ರಾಮ್ ದೇವ್ ಅವರ ಜೀವನ ಕುರಿತ ಪುಸ್ತಕ ಪ್ರಕಟಣೆ ಮತ್ತು ಮಾರಾಟಕ್ಕೆ ಗುರುವಾರ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಬಾ ಪುಸ್ತಕ ಪ್ರಕಟಣೆ ಮತ್ತು ಮಾರಾಟ ನಿಷೇಧವನ್ನು ತೆರವುಗೊಳಿಸಿದ್ದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ‘ಗಾಡ್ ಮ್ಯಾನ್ ಟು ಟೈಕೂನ್’ ಪುಸ್ತಕದಲ್ಲಿ ಮಾನಹಾನಿಕರ ವಿವರಗಳ ಇದ್ದು, ಅದರ ಪ್ರಕಟಣೆ ಮತ್ತು ಮಾರಾಟಕ್ಕೆ ತಡೆ ನೀಡಬೇಕು ಎಂದು ಬಾಬಾ ರಾಮ್ ದೇವ್ ಕೋರ್ಟ್‍ಗೆ ಮನವಿ ಮಾಡಿದ್ದರು. ಪ್ರಧಾನಿ ಮೋದಿ ಹತ್ಯೆಗೆ ಇಸಿಸ್ ಸಂಚು

ಅಹಮದಾಬಾದ್, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಉಗ್ರರು ಸ್ಕೆಚ್ ಹಾಕಿರುವದು ಬಯಲಾಗಿದೆ. ಪ್ರಧಾನಿ ಮೋದಿ ಅವರನ್ನು ಸ್ನೈಪರ್ ರೈಫಲ್‍ನಲ್ಲಿ ಹತ್ಯೆ ಮಾಡೋಣ ಎಂದು ಶಂಕಿತ ಇಸಿಸ್ ಉಗ್ರ ಉಬೈದ್ ಮಿರ್ಜಾ ಸಂದೇಶ ರವಾನಿಸಿದ್ದು ಆನ್‍ಲೈನ್ ಮೆಸೇಜಿಂಗ್ ಆಪ್‍ನಲ್ಲಿ ನಡೆದ ಮಾತುಕತೆಯ ವಿವರಗಳು ಗುಜರಾತ್ ಎಟಿಎಸ್‍ಗೆ ಸಿಕ್ಕಿದೆ. ಪ್ರಧಾನಿ ಮೋದಿಗೆ ಎದುರಾಗಿದ್ದ ಅಪಾಯದ ಬಗ್ಗೆ ಬಯಲಾಗಿದೆ. ಉಬೈದ್ ಕಾಸಿಮ್ ಸ್ಟಿಂಬರ್ ವಾಲಾ ಎಂಬಾತನಿಗೆ ಸಂದೇಶ ನೀಡಿದ್ದಾನೆ. ಈ ಸಂಬಂಧ ಸೆಲ್‍ಫೆÇೀನ್ ಹಾಗೂ ಪೆನ್‍ಡ್ರೈವ್‍ನಲ್ಲಿರುವ ದಾಖಲೆಗಳನ್ನು ಗುಜರಾತ್ ಎಟಿಎಸ್ ನವರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗುಜರಾತ್ ಅಂಕಲೇಶ್ವರ್ ಕೋರ್ಟ್‍ನಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಗುಜರಾತ್ ಸೂರತ್ ನಿವಾಸಿಗಳಾಗಿರುವ ಉಬೈದ್ ಮಿರ್ಜಾ ಹಾಗೂ ಕಾಸಿಮ್ ಸ್ಟಿಂಬರ್ ವಾಲಾರನ್ನು 2017ರ ಅಕ್ಟೋಬರ್ 25 ರಂದು ಗುಜರಾತ್ ಎಟಿಎಸ್ ಬಂಧಿಸಿತ್ತು.

ಅಪಹರಣದ ಬಗ್ಗೆ ಸತತ ಸಂಪರ್ಕ

ನವದೆಹಲಿ, ಮೇ 10: ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರಧಾರಿಯೊಬ್ಬ 7 ಮಂದಿ ಭಾರತೀಯರನ್ನು ಅಪಹರಿಸಿರುವ ವರದಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರರು, ನಾವು ಅಫ್ಘಾನಿಸ್ತಾನದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತು ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಅವರು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರು ಮತ್ತು ಅಲ್ಲಿನ ಭದ್ರತಾ ಸಲಹೆಗಾರರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎಲ್ಲಾ ರೀತಿಯ ನೆರವು ಕೋರಿರುವದಾಗಿ ತಿಳಿಸಿದ್ದಾರೆ. ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಭಾರತಕ್ಕೆ ಅಕ್ರಮವಾಗಿ ಹಣ ವರ್ಗಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಇದು ಪಾಕಿಸ್ತಾನದ ರಾಷ್ಟ್ರೀಯ ಲೆಕ್ಕಪತ್ರ ವಿಭಾಗ ಮಾಡಿರುವ ಆಪಾದನೆಯಾಗಿದೆ. ಇದಕ್ಕೆ ನಾವು ಪ್ರತಿಕ್ರಿಯಿಸಬೇಕಾದ ಅವಶ್ಯಕತೆಯಿಲ್ಲ ಎನಿಸುತ್ತದೆ ಎಂದು ರವೀಶ್ ಕುಮಾರ್ ಹೇಳಿದರು.

ಕೇರಳದಲ್ಲಿ ಲಿಂಗಪರಿವರ್ತಿತರ ಮದುವೆÀ

ತಿರುವನಂತಪುರಂ, ಮೇ 10: ಲಿಂಗಪರಿವರ್ತಿತರಾದ ಸೂರ್ಯ ಮತ್ತು ಇಶಾನ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಲಿಂಗಪರಿವರ್ತಿತ ದಂಪತಿ ಎಂಬ ಹೊಸ ದಾಖಲೆ ಬರೆದಿದ್ದಾರೆ. 31 ವರ್ಷದ ಸೂರ್ಯ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಬದಲಾಗಿದ್ದರು. ಈ ಇಬ್ಬರೂ ಇಂದು ತಿರುವನಂತಪುರಂನ ಮನ್ನಂ ಕ್ಲಬ್‍ನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ಮದುವೆಯಾದರು. ಈ ಕ್ಷಣಕ್ಕೆ ನೂರಾರು ಲಿಂಗಪರಿವರ್ತಿತರು ಸಾಕ್ಷಿಯಾದರು. ಹೆಣ್ಣಾಗಿ ಜನಿಸಿದ್ದ 33 ವರ್ಷದ ಇಶಾನ್ 2014ರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ ಒಂದು ಸಮಯದಲ್ಲಿ ಅವನು ಅವಳಾಗಿಯೂ, ಅವಳು ಅವನಾಗಿ ಇದ್ದ ಇಶಾನ್ ಮತ್ತು ಸೂರ್ಯ ಈಗ ಮದುವೆಯಾಗುವ ಮೂಲಕ ಸಮಾಜದಲ್ಲಿ ಲಿಂಗ ಪರಿವರ್ತಿತರ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊಡೆದು ಹಾಕಲು ಮುಂದಾಗಿದ್ದಾರೆ.

ಕಾಶ್ಮೀರಿ ಯುವಕರಿಗೆ ರಾವತ್ ಕಿವಿಮಾತು

ಶ್ರೀನಗರ, ಮೇ 10: ‘ಕಾಶ್ಮೀರ ಯುವಕರು ಅನಗತ್ಯವಾಗಿ ಕಲಹ ಸೃಷ್ಟಿಸುವದು ಬೇಡ. ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡಲು ಸೇನೆ ಸದಾ ಸಿದ್ಧವಿರುವದರಿಂದ ಆಜಾದಿ (ಸ್ವಾತಂತ್ರ್ಯ) ದಕ್ಕುವದಿಲ್ಲ’ ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ. ‘ಆಜಾದಿ ಪಡೆಯುವ ಸಲುವಾಗಿ ರಾಜ್ಯದಲ್ಲಿನ ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅದು ಅವರನ್ನು ದಾರಿ ತಪ್ಪಿಸುತ್ತಿದೆ’ ಎಂದಿದ್ದಾರೆ. ‘ಈ ಸಂಖ್ಯೆ (ಸೇನೆ ಜೊತೆಗಿನ ಗುಂಡಿನ ಕಾಳಗದಲ್ಲಿ ಸತ್ತವರು) ಪ್ರಮುಖವಾದುದಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇರುವದು ನನಗೆ ತಿಳಿದಿದೆ. ಇಂತಹ ಹೋರಾಟಗಳು ನಿರರ್ಥಕ ಎಂಬದನ್ನು ಒತ್ತಿಹೇಳಲು ಬಯಸುತ್ತೇನೆ. ಇದರಿಂದ ಏನನ್ನೂ ಸಾಧಿಸಲಾಗದು. ಸದ್ಯ ಹೊಸ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ನೀವು ಸೇನೆಯನ್ನು ಎದುರಿಸಲಾರಿರಿ’ ಎಂದು ಹೇಳಿದ್ದಾರೆ. ‘ನಾವು ಕೊಲ್ಲುವದನ್ನು ಇಷ್ಟಪಡುವದಿಲ್ಲ. ಆದರೆ, ಯಾರಾದರೂ ನಮ್ಮೊಡನೆ ಹೋರಾಟಕ್ಕೆ ಬಂದರೆ ಪೂರ್ಣ ಸಾಮಥ್ರ್ಯದೊಂದಿಗೆ ಹೋರಾಡುತ್ತೇವೆ’ ಎಂದೂ ಎಚ್ಚರಿಸಿದ್ದಾರೆ.