ನಾಪೆÇೀಕ್ಲು, ಮೇ 10: ನೀರಿಗಾಗಿ ಪ್ರತಿಭಟನೆ, ಹೋರಾಟ, ಹೊಡೆದಾಟಗಳು ಕರ್ನಾಟಕ - ತಮಿಳುನಾಡು ಜನರ ಮಧ್ಯೆ ಸಾಮಾನ್ಯ ವಿಷಯ. ಆದರೆ ಕಾವೇರಿ ಸಮೀಪದಲ್ಲಿ ಹರಿಯುತ್ತಿದ್ದರೂ ಈ ಗ್ರಾಮದ ಜನರಿಗೆ ನೀರಿಲ್ಲ ಎಂದರೆ ನಂಬಲು ಸಾಧ್ಯವೇ? ಆದರೆ ಇದು ಕಟು ಸತ್ಯ.
ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಈಸ್ಟ್ ಕೊಳಕೇರಿ ಗ್ರಾಮದ ಜನತೆಗೆ ಇಲ್ಲಿಯವರೆಗೆ ಕುಡಿಯುವ ನೀರು ಪೂರೈಕೆ ಆಗಿಲ್ಲ. ಇದರಿಂದ ಬಿದ್ದಾಟಂಡ, ನಿಡುಮಂಡ, ಪುಲ್ಲೇರ, ತಟ್ಟಂಡ, ಅಚ್ಚಾಂಡಿರ, ಅಚ್ಚಪಂಡ, ಬೊಟ್ಟೋಳಂಡ, ಕೋಟೆರ, ಬೇತು ಗ್ರಾಮದ ಮುಕ್ಕಾಟಿ ಕುಟುಂಬಸ್ಥರು, ಈ ವ್ಯಾಪ್ತಿಯ ಕೂಲಿ ಕಾರ್ಮಿಕರು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ 2015-16ನೇ ಸಾಲಿನಲ್ಲಿ ಕಿರು ನೀರಾವರಿ ಯೋಜನೆ ಯಡಿಯಲ್ಲಿ ರೂ. 28 ಲಕ್ಷ ಮಂಜೂರು ಮಾಡಲಾಗಿ ಕಾಮಗಾರಿಯೂ ನಡೆದಿದೆ. ಆದರೆ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆ ನೀರು ಪೂರೈಕೆ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ನೀರಿನ ಪೂರೈಕೆಗಾಗಿ ಕಕ್ಕಬೆ ಹೊಳೆ ಬದಿಯಲ್ಲಿ ಜಾಕ್ವೆಲ್ ನಿರ್ಮಿಸಿ ಬೊಮ್ಮಂಜಕೇರಿ ಶ್ರೀ ಪೆÇನ್ನು ಮುತ್ತಪ್ಪ ದೇವಸ್ಥಾನ, ಮೂಟೇರಿ ಶ್ರೀ ಉಮಾ ಮಹೇಶ್ವರಿ ದೇವಸ್ಥಾನ, ಬಿದ್ದಾಟಂಡ ಐನ್ಮನೆ ಮತ್ತು ಬೇತು ಗ್ರಾಮದ ಮುಕ್ಕಾಟಿ ಕುಟುಂಬಸ್ಥರ ಮನೆ ಬಳಿ ನಾಲ್ಕು ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಜಾಕ್ವೆಲ್ನಿಂದ ಈ ನೀರಿನ ಟ್ಯಾಂಕ್ಗೆ ನೀರು ತುಂಬಿಸಲು ಮಾತ್ರ ವ್ಯವಸ್ಥೆ ಮಾಡಿದ್ದು, ಟ್ಯಾಂಕ್ನಿಂದ ಹೊರಕ್ಕೆ ನೀರು ಪೂರೈಸಲು ಯಾವದೇ ಪೈಪ್ ಜೋಡಣೆ ಕಾರ್ಯ ನಡೆದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಆದರೆ ಇದರಲ್ಲಿ ನೀರು ತುಂಬಿಸಲು ಮಾರ್ಚ್ ತಿಂಗಳವರೆಗೆ ಮಾತ್ರ ಸಾಧ್ಯವಿದೆ. ನಂತರದ ದಿನಗಳಲ್ಲಿ ಜಾಕ್ವೆಲ್ ಆಳ ಇಲ್ಲದ ಕಾರಣ ಇದರಲ್ಲಿ ನೀರು ಬತ್ತಿ ಹೋಗುತ್ತದೆ ಎನ್ನುತ್ತಾರೆ ಜನ.
ಈ ಅವ್ಯವಸ್ಥೆಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿರುವ ಗ್ರಾಮಸ್ಥರು ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದ್ದರೂ, ಯಾವದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಚುನಾವಣೆಯ ನಂತರ ಲೋಕಾಯುಕ್ತರಿಗೆ ದೂರು ನೀಡಲಾಗುವದು ಎಂದು ಗ್ರಾಮಸ್ಥರಾದ ಬಿದ್ದಾಟಂಡ ಎಸ್. ತಮ್ಮಯ್ಯ ತಿಳಿಸಿದ್ದಾರೆ.
- ಪಿ.ವಿ. ಪ್ರಭಾಕರ್