ಚೆಟ್ಟಳ್ಳಿ, ಮೇ 10: ಚೆಟ್ಟಳ್ಳಿಯ ಸ್ಥಾನೀಯ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯ ನಡೆಯಿತು.

ಚೆಟ್ಟಳ್ಳಿಯ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ವಕ್ತಾರ ಪುತ್ತರೀರ ಪಪ್ಪುತಿಮ್ಮಯ್ಯ, ಜಿಲ್ಲಾಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ವಕ್ಛ್ ಬೋರ್ಡ್‍ನ ಅಧ್ಯಕ್ಷ ಅಬ್ದುಲ್ ರೆಹಮಾನ್, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆ ತೆನ್ನಿರ ಮೈನ, ಹಿರಿಯ ಕಾಂಗ್ರೆಸಿಗ ಶಶಿಕುಮಾರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ, ಸದಸ್ಯರಾದ ಮೊಹಮದ್ ರಫಿ, ಸುಲೋಚನ, ಕರ್ನಾಟಕ ರಾಜ್ಯ ಸಾರಿಗೆ ನಿಗಮದ ನಿರ್ದೇಶಕ ಸೌಕತ್ತಾಲಿ, ಕಾಂಗ್ರೆಸ್ ಜಿಲ್ಲಾ ಮುಖಂಡ ಶಾಜಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಚುನಾವಣಾ ಪ್ರಚಾರದಲ್ಲಿದ್ದ ಚಂದ್ರಕಲಾ ರಾತ್ರಿ 8.30 ಗಂಟೆಗೆ ಆಗಮಿಸಿ ಪ್ರಚಾರ ಮಾಡಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್, ಚೆಟ್ಟಳ್ಳಿ ಸಾರ್ವಜನಿಕರು, ವರ್ತಕರಲ್ಲಿ ಕಾಂಗ್ರ್ರೆಸ್ ಪಕ್ಷಕ್ಕೆ ಮತಚಲಾಯಿಸುವಂತೆ ಕೋರಿದರು.