ಚೆಟ್ಟಳ್ಳಿ, ಮೇ 10: ಜಭ್ಬೂಮಿ ಎಂಬ ಕೊಡವ ಆಡಿಯೋ ಸಿಡಿ ನಾಪೋಕ್ಲುನಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ನಮ್ಮೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಮಣವಟ್ಟೀರ ದಯಾ ಚಿಣ್ಣಪ್ಪ ತಿಳಿಸಿದ್ದಾರೆ.

ಕೊಡಗಿನ ಹಿರಿಯ ಸಾಹಿತಿಗಳಾದ ಬಾಚರಣಿ ಯಂಡ ಅಪ್ಪಣ್ಣ, ಉಳ್ಳಿ ಯಡ ಡಾಟಿ ಪೂವಯ್ಯ, ದಿವಂಗತ ಮಂಡೀರ ಜಯ ಅಪ್ಪಣ್ಣ, ದಿವಂಗತ ಬೊವ್ವೆರಿಯಂಡ ಪುಟ್ಟ ಪೆಮ್ಮಯ್ಯ ಹಾಗೂ ಉಳುವಂಗಡ ಲೋಹಿತ್ ಭೀಮಯ್ಯ, ಮಣವಟ್ಟಿರ ದಯಾ ಚಿಣ್ಣಪ್ಪ ರಚಿಸಿರುವ 10 ಹಾಡುಗಳನ್ನೊಳಗೊಂಡ ಉಳುವಂಗಡ ಲೋಹಿತ್, ಮಣವಟ್ಟಿರ ದಯಾ ಚಿಣ್ಣಪ್ಪ, ಚೆಕ್ಕೆರ ಪಂಚಮ್ ಬೋಪಣ್ಣ, ಅಣ್ಣಳಮಡ ಗಿರೀಶ್, ಪರದಂಡ ಕಾವ್ಯ ಕಾವೇರಮ್ಮ ಹಾಗೂ ಸಂಡಿಗರೊಂದಿಗೆ ಹಾಡಿರುವ ಮೈಸೂರು ದಿ ಕೊಡವ ಸಮಾಜ ಕಲ್ಚರ್ ಅಯಿಂಡ್ ಸ್ಪೋಟ್ಸ್ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ ಟಿಸಿಎಸ್ ಎಂಬ ಹೊಸ ತಂತ್ರಜ್ಞಾನದೊಂದಿಗೆ ತತ್ವಮಸಿ ಕ್ರಿಯೇಶನ್ಸ್ ತಂಡ ತಯಾರಿಸಲಾದ ಈ ಜಭ್ಬೂಮಿ ಎಂಬ ಕೊಡವ ಆಡಿಯೋ ಸಿಡಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ ಎಂದರು.