ಶ್ರೀಮಂಗಲ, ಮೇ 10: ಟಿ. ಶೆಟ್ಟಿಗೇರಿಯ ನಂ. 33ನೇ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ನಡೆಯಿತು.

ಮುಂದಿನ ಅವಧಿಗೆ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕಟ್ಟೆರ ವಿಶ್ವನಾಥ್, ಉಪಾಧ್ಯಕ್ಷರಾಗಿ ಮನ್ನೇರ ರಮೇಶ್, ಕಾರ್ಯದರ್ಶಿಯಾಗಿ ಉಳುವಂಗಡ ಗಣಪತಿ, ಸಹಕಾರ್ಯದರ್ಶಿಯಾಗಿ ಅಪ್ಪಚ್ಚಂಗಡ ಮೋಟಯ್ಯ, ಖಜಾಂಚಿಯಾಗಿ ಚಂಗುಲಂಡ ಸತೀಶ್, ಹಿರಿಯ ಸಲಹೆಗಾರರಾಗಿ ಮಾಯಣಮಾಡ ಸೋಮಯ್ಯ, ಗೌರವ ಅಧ್ಯಕ್ಷರಾಗಿ ಚಟ್ರಂಡ ಕಾರ್ಯಪ್ಪ ಅವರನ್ನು ನೇಮಕ ಮಾಡಲಾಯಿತು.