ಮಡಿಕೇರಿ, ಮೇ 10: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯಲ್ಲಿ 2018-19ನೇ ಸಾಲಿನ ಪ್ರಥಮ ಸೆಮಿಸ್ಟರ್ನ ಬಿಎ, ಬಿ.ಕಾಂ, ಬಿಬಿಎ ಮತ್ತು ಬಿಎಸ್ಸಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಮಂಗಳೂರು ವಿಶ್ವ ವಿದ್ಯಾಲಯದ ಅಧೀನಕ್ಕೆ ಒಳಪಟ್ಟ ನ್ಯಾಕ್ನಿಂದ ‘ಬಿ’ ಗ್ರೇಡ್ ಮಾನ್ಯತೆಯನ್ನು ಪಡೆದಿರುವ ಈ ಕಾಲೇಜು ವಿದ್ಯಾಭ್ಯಾಸವನ್ನು ನೀಡುವ ಜೊತೆಗೆ ಕನ್ನಡ ವಿಭಾಗದಲ್ಲಿ ರ್ಯಾಂಕ್ ಗಳಿಸಿದೆ.
ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ, ಕ್ರೀಡೆ, ಎನ್ಎಸ್ಎಸ್, ರೋವರ್ ಎಂಡ್ ರೇಂಜರ್ಸ್, ರೆಡ್ಕ್ರಾಸ್ ಘಟಕಗಳು, ನುರಿತ ಅನುಭವಿ ಉಪನ್ಯಾಸಕರಿಂದ ಭೋದನೆ, ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ತರಬೇತಿ, ವಿವಿಧ ವಿದ್ಯಾರ್ಥಿ ವೇತನಗಳ ಸೌಲಭ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಹಾಗೂ ಉಚಿತ ತರಬೇತಿ ಸೌಲಭ್ಯ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿನಿಯರಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ, ವಿದ್ಯಾರ್ಥಿಗಳಿಗೆ ದತ್ತಿನಿಧಿ ಸೌಲಭ್ಯ, ಎಜುಸ್ಯಾಟ್ ಮೂಲಕ ಕೌಶಲ್ಯ ಮತ್ತು ಆಂಗ್ಲಭಾಷೆ ಕಲಿಕೆ ಹಾಗೂ ಉತ್ತಮ ಕಂಪ್ಯೂಟರ್ ಲ್ಯಾಬ್. ಹೆಚ್ಚಿನ ಮಾಹಿತಿಗಾಗಿ 08272-255110 ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.