ಹೆಬ್ಬಾಲೆ, ಮೇ 10: ಸಮೀಪದ ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾರರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ಎಂಬ ಸಂದೇಶ ಗಳೊಂದಿಗೆ ಜಾಗೃತಿ ಮೂಡಿಸ ಲಾಯಿತು. ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಜಾಗೃತಿ ಕಲಾವಿದ ರಾಜು ಚಾಲನೆ ನೀಡಿದರು.

ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾನದಿಂದ ಯಾವದೇ ಕಾರಣಕ್ಕೂ ವಂಚಿತರಾಗ ಬೇಡಿ. ಯಾವದೇ ರೀತಿಯ ಆಮಿಷಕ್ಕೆ ಮರುಳಾಗದಿರಿ. ವಿವೇಚನೆಯಿಂದ ಮತ ಚಲಾಯಿಸಿ. ಮತದಾನ ಮಾಡಿದವರೇ ಮಹಾಶೂರರು ಎಂಬ ಸಂದೇಶಗಳನ್ನು ಸಾರುವ ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದರು.

ಯುವ ಮತದಾರರಲ್ಲಿ ಜಾಗೃತಿ, ಜಾಥಾ, ಮನೆ ಮನೆಗೆ ಭೇಟಿ ನೀಡಿ, ಸಹಿ ಸಂಗ್ರಹ, ವಿಕಲಚೇತನರಿಂದ ತ್ರಿಚಕ್ರ ವಾಹನದ ಮೂಲಕ ಬೈಕ್, ರೇಡಿಯೋ ಕಾರ್ಯಕ್ರಮ, ಬಸ್ ನಿಲ್ದಾಣದಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ಜೊತೆಗೆ ಈ ಬಾರಿ ಪ್ರಥಮ ಬಾರಿಗೆ ಚುನಾವಣಾ ಆಯೋಗ ಪರಿಚಯಿಸಿರುವ ವಿವಿಪ್ಯಾಟ್ ಬಗ್ಗೆ ಮತದಾರರಿಗೆ ಸೆಕ್ಟರ್ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೆಚ್.ಡಿ. ಹರೀಶ್ ಕುಮಾರ್, ಕಲಾವಿದ ಈ. ರಾಜು ಮತ್ತಿತರರು ಇದ್ದರು.