ಶನಿವಾರಸಂತೆ, ಮೇ 10: ವಿಧಾನಸಭಾ ಚುನಾವಣೆ ಹಿನ್ನೆಲೆ ಸೇಕ್ರೆಡ್ ಹಾರ್ಟ್ ಪಿ.ಯು. ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು.
ಕಾಲೇಜಿನಿಂದ ಮುಖ್ಯ ರಸ್ತೆಯಲ್ಲಿ ಸಾಗಿದ ವಿದ್ಯಾರ್ಥಿಗಳು ಬೈಪಾಸ್ ರಸ್ತೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಫಲಕಗಳನ್ನು ಹಿಡಿದು ಮತದಾನ ಮಾಡಿ - ಪ್ರಜಾಪ್ರಭುತ್ವ ಉಳಿಸಿ, ಮತದಾನ ಪವಿತ್ರವಾದ ಹಕ್ಕು, ಭ್ರಷ್ಟರನ್ನು ಧಿಕ್ಕರಿಸಿ ಹಾಗೂ ಉತ್ತಮ ಚಾರಿತ್ರ್ಯದ ಅಭ್ಯರ್ಥಿಯನ್ನೇ ಆರಿಸಿ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು.
ಜಾಥಾದಲ್ಲಿ ವಿದ್ಯಾರ್ಥಿ ಗಳೊಂದಿಗೆ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಪಾಲ್ಗೊಂಡಿದ್ದರು.