ಮಡಿಕೇರಿ, ಮೇ 10: ರಾತ್ರಿ ವೇಳೆ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಹುಲಿಯು ಕೊಂದು ತಿಂದು ಹಾಕಿರುವ ದುರ್ಘಟನೆ ಮಾಂದಲಪಟ್ಟಿ ಬಳಿ ಕಾಲೂರು ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ ನಿವಾಸಿ, ಪಳೆಯಂಡ ಸತೀಶ್ ಎಂಬವರಿಗೆ ಸೇರಿದ ಕರುವನ್ನು ನಿನ್ನೆ ಸಂಜೆ ಎಂದಿನಂತೆ ಕಟ್ಟಿಹಾಕಿದ್ದು, ಒಂದು ವರ್ಷದ ಈ ಕರುವನ್ನು ಬೆಳಿಗ್ಗೆ ನೋಡಲಾಗಿ ಹುಲಿ ಧಾಳಿ ನಡೆಸಿ ಕಟ್ಟಿ ಹಾಕಿದ್ದಲ್ಲೇ ಕೊಂದು ತಿಂದು ಹಾಕಿರುವ ಭಯಾನಕ ದೃಶ್ಯ ಗೋಚರಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆಯುವದರೊಂದಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಲಾಗಿದೆ.