ಕೂಡಿಗೆ, ಮೇ 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಒಕ್ಕೂಟ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಒಕ್ಕೂಟದ ಸಾಧನೆಗೆ ಸಹಕರಿಸಿದ ಪದಾಧಿಕಾರಿಗಳಿಗೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಅವರು ಅಭಿನಂದನಾ ಪತ್ರಗಳನ್ನು ವಿತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಏಳು ವಲಯಗಳಲ್ಲಿ ಕೂಡಿಗೆ ವಲಯವು ಒಂದಾಗಿದ್ದು, ಕೂಡಿಗೆ ವಲಯದಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ 33 ಹೊಸ ಸಂಘಗಳ ರಚನೆ, 78 ಸದಸ್ಶರ ಸೇರ್ಪಡೆ ಮಾಡಲಾಗಿದ್ದು, ಒಂಭತ್ತು ಕೋಟಿ ತೊಂಬತ್ತೆಂಟು ಲಕ್ಷ ಪ್ರಗತಿನಿಧಿಯನ್ನು ವಿತರಿಸಲಾಗಿದೆ. ಶೇ. 100 ಮರುಪಾವತಿಯನ್ನು ಹೊಂದಿದ್ದು 68 ಸೋಲಾರ್ ಅಳವಡಿಕೆ, 1048 ನಿರಂತರ ಪತ್ರಿಕೆ ಚಂದಾದಾರರ ನೋಂದಾವಣೆ 49,000 ಅನುದಾನ ವಿತರಣೆ, ಸಾಮೂಹಿಕ ಸತ್ಯ ನಾರಾಯಣ ಪೂಜೆ ಸಾಧನಾ ಸಮಾವೇಶ ಕೃಷಿ ವಿಚಾರ ಸಂಕೀರ್ಣ, ಶೃದ್ಧಾ ಕೇಂದ್ರಗಳ ಸ್ವಚ್ಛತೆ, ಪರಿಸರ ಜಾಗೃತಿ ಸ್ವಚ್ಛತಾ ಕಾರ್ಯಕ್ರಮ ಸಂಘಗಳ ಗುಣಮಟ್ಟದ ನಿರ್ವಹಣೆ ಹಾಗೂ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕರಿಸಿದ ಪದಾಧಿಕಾರಿಗಳನ್ನು ಗುರುತಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ.
ಒಕ್ಕೂಟದ ಸಾಧನೆಯಲ್ಲಿ ಮೇಲ್ವೀಚಾರಕರಿಗೆ ಹಾಗೂ ಸೇವಾ ಪ್ರತಿನಿಧಿಗಳಿಗೆ ಸೇವಾಭಾವನೆಯಿಂದ ಸಹಕಾರ ನೀಡಿರುವ ಒಕ್ಕೂಟದ ಅಧ್ಯಕ್ಷೆ ಶಾಂತಿ ಯಡವನಾಡು, ನಾಗೇಶ್ ಸೀಗೆಹೊಸೂರು, ಮಂದಾಕಿನಿ ಹೆಗ್ಡೆಹಳ್ಳಿ, ಶರ್ಮಿಳಾ ಬಸವೇಶ್ವರ ಬಡಾವಣೆ, ರಾಧ ಕೂಡು ಮಂಗಳೂರು, ಮಂಜುಳಾ ಗೊಂದಿ ಬಸವನಹಳ್ಳಿ, ಸುಮತಿ ಕೂಡಿಗೆ, ವನಿತಾ ಗುಮ್ಮನಕೊಲ್ಲಿ ಹಾಗೂ ಪದಾಧಿಕಾರಿಗಳಾದ ಅರುಣಾಕ್ಷಿ, ಕೂಡುಮಂಗಳೂರು ಶೋಭಾ ಗೊಂದಿಬಸವನಹಳ್ಳಿ, ವಿನೋದ್ ಕುಮಾರ್ ಹಾರಂಗಿ, ಮಂಜುಳಾ ಸುಂದರನಗರ, ಪುಷ್ಪಾ ಗುಮ್ಮನಕೊಲ್ಲಿ, ಕಮಲಾಕ್ಷಿ ನವಗ್ರಾಮ, ಅನಿತಾ ವಿಜಯನಗರ ಅಭಿನಂದನಾ ಪತ್ರ ಪಡೆದುಕೊಂಡರು.
ವಲಯದ ಸೇವಾಪ್ರತಿನಿಧಿಗಳಾದ ಸುವರ್ಣ, ನಿರ್ಮಳಾ, ಶಶಿಕಲಾ, ಹೇಮಲತಾ, ಸುನಿತಾ ಉಪಸ್ಥಿತರಿದ್ದರು.