ಗೋಣಿಕೊಪ್ಪ ವರದಿ, ಮೇ 10: ಪಟ್ಟಣದಲ್ಲಿ ಬಿಜೆಪಿ ವತಿಯಿಂದ ರೋಡ್ ಶೋ ನಡೆಸುವ ಮೂಲಕ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರ ಮತ ಪ್ರಚಾರ ನಡೆಸಲಾಯಿತು.

ಆರ್‍ಎಂಸಿ ಆವರಣದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರುಗಳು ಬಿಜೆಪಿಗೆ ಮತಯಾಚಿಸಿದರು. ಉಮಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಯಿತು.

ಈ ಸಂದರ್ಭ ಶಾಸಕ ಕೆ. ಜಿ. ಬೋಪಯ್ಯ, ವೀರಾಜಪೇಟೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಮಹಿಳಾ ಘಟಕ ಅಧ್ಯಕ್ಷೆ ಯಮುನಾ ಚೆಂಗಪ್ಪ ಇತರರು ಪಾಲ್ಗೊಂಡಿದ್ದರು.