ಮಡಿಕೇರಿ, ಮೇ 10: ಪಂದ್ಯಾಟ ಸಮಬಲಗೊಳ್ಳುವದರೊಂದಿಗೆ ನಿಯಮಾನುಸಾರ ನೀಡಲಾದ ಸೂಪರ್ ಓವರ್‍ನಲ್ಲಿ ಮುಂಡಂಡ ತಂಡವನ್ನು ಮಣಿಸಿದ ಮಂಡೇಪಂಡ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಇನ್ನುಳಿದಂತೆ 12 ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಮಂಡೇಪಂಡ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಮುಂಡಂಡ ತಂಡ ನಿಗದಿತ 6 ಓವರ್‍ನಲ್ಲಿ 5 ವಿಕೆಟ್‍ಗೆ 36 ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಮಂಡೇಪಂಡ ತಂಡ 2 ವಿಕೆಟ್ ಕಳೆದುಕೊಂಡು 36 ರನ್‍ಗಳಿಸಿ ಪಂದ್ಯಾಟ ಸಮನಾಗಿಸಿಕೊಂಡಿತು. ಈ ಸಂದರ್ಭದಲ್ಲಿ ಸೂಪರ್ ಓವರ್ ಅವಕಾಶ ನೀಡಲಾಗಿ ಅದರಲ್ಲಿ ಮಂಡೇಪಂಡ ತಂಡ 1 ವಿಕೆಟ್‍ಗೆ 11 ರನ್ ಗಳಿಸಿದರೆ, ಮುಂಡಂಡ ತಂಡ 1 ವಿಕೆಟ್‍ಗೆ 9 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಮುಂಡಂಡ ಪ್ರವೀಣ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ಅಪ್ಪುಡ ತಂಡ 4 ಓವರ್‍ನಲ್ಲಿ 4 ವಿಕೆಟ್‍ಗೆ 29 ರನ್ ಗಳಿಸಿದರೆ, ಅಮ್ಮಚ್ಚಿಮಣಿಯಂಡ ತಂಡ 2 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಅಪ್ಪುಡ ಮಹೇಶ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು. ಮಾಳೇಟಿರ (ಕೆದಮುಳ್ಳೂರು) ತಂಡ 3 ವಿಕೆಟ್‍ಗೆ 49 ರನ್ ಗಳಿಸಿದರೆ, ಅರಮಣಮಾಡ ತಂಡ 5 ವಿಕೆಟ್‍ಗೆ 52 ರನ್ ಇಳಿಸಿ ಗುರಿ ಸಾಧಿಸಿತು. ಅರಮಣಮಾಡ ಚರ್ಮಣ 46 ರನ್ ಗಳಿಸಿ ಗಮನ ಸೆಳೆದರೆ, ಮಾಳೇಟಿರ ರಿಶಬ್ ಪಂದ್ಯಪುರುಷ ಗೌರವಕ್ಕೆ ಪಾತ್ರರಾದರು. ಕೈಪಟ್ಟಿರ ತಂಡ 3 ವಿಕೆಟ್‍ಗೆ 38 ರನ್ ಗಳಿಸಿದರೆ, ಪೊನ್ನಚಂಡ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೈಪಟ್ಟಿರ ಜೋಯಪ್ಪ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ಅಮ್ಮಾಟಂಡ ತಂಡ 6 ವಿಕೆಟ್‍ಗೆ 40 ರನ್ ಗಳಿಸಿದರೆ, ಚೆನ್ನಪಂಡ ತಂಡ 2 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿ, 9 ರನ್‍ಗಳ ಅಂತರದಿಂದ ಗೆಲುವು ಸಾಧಿಸಿತು. ಕೋಚಮಂಡ ತಂಡ 1 ವಿಕೆಟ್‍ಗೆ 31 ರನ್ ಗಳಿಸಿದರೆ, ನೆಲ್ಲಿರ ತಂಡ 2 ವಿಕೆಟ್ ನಷ್ಟದಲ್ಲಿ 36 ರನ್ ಗಳಿಸಿ ಗುರಿ ಸಾಧಿಸಿತು. ಕೋಚಮಂಡ ರಕ್ಷಿತ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು. ಮಡೆಯಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೇ 55 ರನ್ ಗಳಿಸಿದರೆ, ಚೊಟ್ಟಂಗಡ ತಂಡ 1 ವಿಕೆಟ್ ನಷ್ಟದಲ್ಲಿ 52 ರನ್ ಗಳಿಸಿ 4 ರನ್‍ಗಳಿಂದ ಸೋಲನುಭವಿಸಿತು. ಚೊಟ್ಟಂಗಡ ತಿಮ್ಮಣ್ಣ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು. ಮಂಡೇಪಂಡ ತಂಡ 6 ವಿಕೆಟ್‍ಗೆ 58 ರನ್ ಗಳಿಸಿದರೆ, ಬೇಪಡಿಯಂಡ ತಂಡ 5 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ 14 ರನ್‍ಗಳ ಅಂತರದಿಂದ ಸೋಲನುಭವಿಸಿತು. ಚೇಪಡಿಯಂಡ ರಜತ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು.

ಮೀದೇರಿರ ತಂಡ 6 ಓವರ್‍ನಲ್ಲಿ 7 ವಿಕೆಟ್‍ಗೆ 36 ರನ್ ಗಳಿಸಿದರೆ, ಸಬ್ಬುಡ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಮೀದೇರಿರ ಮಿಥುನ್ ಪಂದ್ಯಪುರುಷ ಪ್ರಶಸ್ತಿ ಗಳಿಸಿತು. ಚಂಗುಲಂಡ ತಂಡ 2 ವಿಕೆಟ್‍ಗೆ ಭರ್ಜರಿ 77 ರನ್ ಗಳಿಸಿದರೆ, ಮಾಚಿಯಂಡ ತಂಡ 7 ವಿಕೆಟ್ ಕಳೆದುಕೊಂಡು ಕೇವಲ 11 ರನ್ ಮಾತ್ರ ಗಳಿಸಿ 66 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ನೆರವಂಡ ತಂಡ 2 ಓವರ್‍ಗಳಲ್ಲಿ 1 ವಿಕೆಟ್‍ಗೆ 30 ರನ್ ಕಲೆ ಹಾಕಿದರೆ, ಪರವಂಡ ತಂಡ 3 ವಿಕೆಟ್ ಕಳೆದುಕೊಂಡು 4 ರನ್‍ಗಳ ಅಂತರದಿಂದ ಸೋಲನುಭವಿಸಿತು. ಪರವಂಡ ಮಿಥುನ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು. ಕಲ್ಲುಮಾಡಂಡ ತಂಡ 5 ಓವರ್‍ಗೆ 2 ವಿಕೆಟ್‍ಗೆ 23 ರನ್ ಗಳಿಸಿದರೆ, ಕೀತಿಯಂಡ ತಂಡ 1 ವಿಕೆಟ್‍ಗೆ 25 ರನ್ ಗಳಿಸಿ ಗುರಿ ಸಾಧಿಸಿತು. ಕಲ್ಲುಮಾಡಂಡ ಶರನ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು. ಅಜ್ಜಿಕುಟ್ಟಿರ ತಂಡ ಬಾರದ ಕಾರಣ ನೆಲ್ಲಚಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.