ಮಡಿಕೇರಿ, ಮೇ 10: ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಸಂಬಂಧ ಚುನಾವಣಾ ಕರ್ತವ್ಯ ನಿರತ ಮತಗಟ್ಟೆ ಸಿಬ್ಬಂದಿಗಳನ್ನು ತಾ. 11 ರಂದು ನಡೆಯುವ ಮಸ್ಟರಿಂಗ್ ಕೇಂದ್ರಕ್ಕೆ ಸಿಬ್ಬಂದಿಗಳನ್ನು ಕೇಂದ್ರ ಸ್ಥಾನದಿಂದ ಕರೆದುಕೊಂಡು ಹೋಗಲು ಕೆ.ಎಸ್.ಅರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಲಾಗಿದ್ದು, ಬಸ್ ಮಾರ್ಗದ ವಿವರ ಇಂತಿದೆ.

ತಾ. 11 ರಂದು ಬೆಳಿಗ್ಗೆ 6 ಗಂಟೆಗೆ ನಗರದ ಸಂತ ಮೈಕಲರ ಪ್ರೌಢಶಾಲೆ (ಗಾಂಧಿ ಮೈದಾನ)ದಿಂದ ಬಸ್ ಮೂರ್ನಾಡು ಮಾರ್ಗ ಹೊರಟು ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 5 ಗಂಟೆಗೆ ಬೆಟ್ಟಗೇರಿ ನಾಪೋಕ್ಲು, ಪಾರಾಣೆ, ಬೆಳ್ಳುಮಾಡು ಕಡಂಗ, ಕದನೂರು ಮಾರ್ಗ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಬೆಳಿಗ್ಗೆ 5 ಗಂಟೆಗೆ ಹಾಕತ್ತೂರು ಮರಗೋಡು, ಸಿದ್ದಾಪುರ-ಅಮ್ಮತ್ತಿ ಮಾರ್ಗ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 5 ಗಂಟೆಗೆ ಕರಿಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಹೊರಟು ಭಾಗಮಂಡಲ, ಐಯ್ಯಂಗೇರಿ, ನೆಲಜಿ, ಬಲ್ಲಮಾವಟಿ, ಕಕ್ಕಬೆ ಚೈಯಂಡಾಣೆ, ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಭಾಗಮಂಡಲದಿಂದ ಬೆಳಿಗ್ಗೆ 6.30 ಗಂಟೆಗೆ ಹೊರಟು ಭಾಗಮಂಡಲ, ಚೆಟ್ಟಿಮಾನಿ, ಚೇರಂಬಾಣೆ ಕಾರುಗುಂದ ಬೆಟ್ಟಗೇರಿ, ಪಾಲೂರು, ಮೂರ್ನಾಡು, ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಸಂಪಾಜೆ ನಾಡಕಚೇರಿಯಿಂದ ಹೊರಟು ಮದೆನಾಡು, ಕಾಟಕೇರಿ, ಮಡಿಕೇರಿ, ಮೂರ್ನಾಡು, ಮಾರ್ಗ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಭಾಗಮಂಡಲ ನಾಡ ಕಚೇರಿಯಿಂದ ಹೊರಟು ಚೇರಂಬಾಣೆ ಮಾರ್ಗ ನಗರದ ಸಂತ ಜೋಸೆಫರ ಶಾಲೆಗೆ ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ನಾಪೋಕ್ಲು ನಾಡ ಕಚೇರಿಯಿಂದ ಹೊರಟು ಬೆಟ್ಟಗೇರಿ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಸಂಪಾಜೆ ನಾಡ ಕಚೇರಿಯಿಂದ ಹೊರಟು ಮದೆನಾಡು, ಕಾಟಕೇರಿ, ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 5 ಗಂಟೆಗೆ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಹೊರಟು ಶನಿವಾರಸಂತೆ, ಸೋಮವಾರಪೇಟೆ ಮಾದಾಪುರ, ಸುಂಟಿಕೊಪ್ಪ, ಚೆಟ್ಟಳ್ಳಿ, ಸಿದ್ದಾಪುರ ಮಾರ್ಗ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 5.30 ಗಂಟೆಗೆ ಕುಶಾಲನಗರ ನಾಡ ಕಚೇರಿಯಿಂದ ಹೊರಟು ಸಿದ್ದಾಪುರ ಮಾರ್ಗ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಸೋಮವಾರಪೇಟೆ ತಾಲೂಕು ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟು ಮಾದಪುರ, ಕೂಡಿಗೆ ಕುಶಾಲನಗರ, ಸಿದ್ದಾಪುರ ಮಾರ್ಗ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಶನಿವಾರಸಂತೆ ನಾಡಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟು ಅಂಕನಹಳ್ಳಿ, ಆಲೂರು-ಸಿದ್ದಾಪುರ, ಕುಶಾಲನಗರ, ಸಿದ್ದಾಪುರ ಮಾರ್ಗ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಬೆಳಿಗ್ಗೆ 6.30 ಗಂಟೆಗೆ ಶಿರಂಗಾಲದಿಂದ ಹೊರಟು, ಶಿರಂಗಾಲ, ಹೆಬ್ಬಾಲೆ,, ಕುಶಾಲನಗರ ಮಾರ್ಗ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಕುಶಾಲನಗರ ನಾಡ ಕಚೇರಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಗುಡ್ಡೆಹೊಸೂರು, ನಂಜರಾಯಪಟ್ಟಣ, ನೆಲ್ಲಿಹುದಿಕೇರಿ ಮಾರ್ಗ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯಿಂದ ಬೆಳಿಗ್ಗೆ 6.30 ಗಂಟೆಗೆ ಹೊರಟು ಸುಂಟಿಕೊಪ್ಪ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಗ್ಗೆ 5.30 ಗಂಟೆಗೆ ಸೋಮವಾರಪೇಟೆ ತಾಲೂಕು ಕಚೇರಿಯಿಂದ ಹೊರಟು ಮಾದಾಪುರ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6 ಗಂಟೆಗೆ ಕುಶಾಲನಗರ ನಾಡ ಕಚೇರಿಯಿಂದ ಹೊರಟು ಸುಂಟಿಕೊಪ್ಪ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6 ಗಂಟೆಗೆ ಕೊಡ್ಲಿಪೇಟೆ ನಾಡ ಕಚೇರಿಯಿಂದ ಹೊರಟು ಸೋಮವಾರಪೇಟೆ ಮಾದಾಪುರ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಸೋಮವಾರಪೇಟೆ ತಾಲೂಕು ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟು ಮಾದಾಪುರ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ. ವೀರಾಜಪೇಟೆಯ ತಾಲೂಕು ಮೈದಾನದಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮೂರ್ನಾಡು ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ. ಬೆಳಗ್ಗೆ 6 ಗಂಟೆಗೆ ಶ್ರೀಮಂಗಲ ಬಸ್ ನಿಲ್ದಾಣದಿಂದ ಹೊರಟು ಹುದಿಕೇರಿ, ಗೋಣಿಕೊಪ್ಪ ವೀರಾಜಪೇಟೆ, ಮೂರ್ನಾಡು ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6 ಗಂಟೆಗೆ ಕುಟ್ಟ ಬಸ್ ನಿಲ್ದಾಣದಿಂದ ಹೊರಟು ಶ್ರೀಮಂಗಲ, ವೀರಾಜಪೇಟೆ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6 ಗಂಟೆಗೆ ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿಯಿಂದ ಹೊರಟು, ಬಾಳೆಲೆ, ಪೊನ್ನಪ್ಪಸಂತೆ, ಮಾಯಾಮುಡಿ, ಗೋಣಿಕೊಪ್ಪ, ಪಾಲಿಬೆಟ್ಟ ಸಿದ್ದಾಪುರ, ಚೆಟ್ಟಳ್ಳಿ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಪೊನ್ನಂಪೇಟೆ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಹೊರಟು ಗೋಣಿಕೊಪ್ಪ, ಅಮ್ಮತ್ತಿ, ಸಿದ್ದಾಪುರ, ಮರಗೋಡು, ಹಾಕತ್ತೂರು ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ. ಬೆಳಿಗ್ಗೆ 6.30 ಗಂಟೆಗೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ವೀರಾಜಪೇಟೆ, ಮೂರ್ನಾಡು ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ತಿತಿಮತಿ ಜಂಕ್ಷನ್‍ನಿಂದ ಹೊರಟು ಗೋಣಿಕೊಪ್ಪ, ಅಮ್ಮತ್ತಿ, ಸಿದ್ದಾಪುರ, ನೆಲ್ಲಿಹುದಿಕೇರಿ, ಚೆಟ್ಟಳ್ಳಿ ಮಾರ್ಗ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಶ್ರೀಮಂಗಲ, ಬಸ್ ನಿಲ್ದಾಣದಿಂದ ಹೊರಟು ಹುದಿಕೇರಿ, ಗೋಣಿಕೊಪ್ಪ, ವೀರಾಜಪೇಟೆ ಮಾರ್ಗ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗ ಕುಟ್ಟ ಬಸ್ ನಿಲ್ದಾಣದಿಂದ ಹೊರಟು ಕುಟ್ಟ, ಕಾನೂರು, ಪೊನ್ನಂಪೇಟೆ, ಗೋಣಿಕೊಪ್ಪ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಹೊರಟು ಬಾಳೆಲೆ, ಪೊನ್ನಪ್ಪಸಂತೆ, ಮಾಯಾಮುಡಿ, ಗೋಣಿಕೊಪ್ಪ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಪೊನ್ನಂಪೇಟೆ ನಾಡ ಕಚೇರಿಯಿಂದ ಹೊರಟು ಗೋಣಿಕೊಪ್ಪ, ಪಾಲಿಬೆಟ್ಟ, ಅಮ್ಮತ್ತಿ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಹೊರಟು ಗೋಣಿಕೊಪ್ಪ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಬೆಳಿಗ್ಗೆ 6.30 ಗಂಟೆಗೆ ತಿತಿಮತಿ ಜಂಕ್ಷನ್‍ನಿಂದ ಹೊರಟು ಗೋಣಿಕೊಪ್ಪ, ಬಿಟ್ಟಂಗಾಲ ಮಾರ್ಗ, ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.