ಮಡಿಕೇರಿ, ಮೇ 10: ಇತ್ತೀಚೆಗೆ ಮಂಗಳೂರಿನಲ್ಲಿ ಜರುಗಿದ 38ನೇ ಕ್ರೀಡಾಕೂಟದಲ್ಲಿ ಕೊಡಗಿನ ಇಬ್ಬರು ನಿವೃತ್ತ ಯೋಧರು 400 ಮೀಟರ್ ಓಟದಲ್ಲಿ ಚಿನ್ನಗಳಿಸಿದ್ದಾರೆ. ಅಲ್ಲದೆ ಇತರ ಕ್ರೀಡಾ ಪಂದ್ಯಾಟಗಳಲ್ಲಿ ಸಾಧನೆಯೊಂದಿಗೆ ಕೊಡಗಿಗೆ ಕೀರ್ತಿ ತಂದಿದ್ದಾರೆ.

ನಿವೃತ್ತ ಯೋಧ ಪಟ್ರಪಂಡ ಸೋಮೇಶ್ ಚಂಗಪ್ಪ 400 ಮೀ. ಡಬಲ್ಸ್‍ನಲ್ಲಿ ಚಿನ್ನ, 100 ಮೀ. ಎತ್ತರ ಜಿಗಿತದಲ್ಲಿ ಬೆಳ್ಳಿ, 400 ಮೀ. ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ.

ಇನ್ನೋರ್ವ ನಿವೃತ್ತ ಯೋಧ ಹೊಸೊಕ್ಲು ಚಿಣ್ಣಪ್ಪ 1500, 5000, 10,000 ಮೀ. ಓಟದೊಂದಿಗೆ 400 ಮೀ. ರಿಲೇಯಲ್ಲಿ ಚಿನ್ನದ ಪದಕ ಗಳಿಸುವದರೊಂದಿಗೆ ಸಾಧನೆ ಮೆರೆದಿದ್ದಾರೆ. ಈ ಇಬ್ಬರು ಏಷ್ಯಾ ಅಥ್ಲೆಟಿಕ್‍ಗೆ ಅರ್ಹತೆ ಪಡೆದಿದ್ದಾರೆ.