ಜೆಡಿಎಸ್ ಪರ ಪ್ರಚಾರ

ಸೋಮವಾರಪೇಟೆ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರ ಪರ ಪ್ರಚಾರ ಸಭೆಯಲ್ಲಿ ಜೆಡಿಎಸ್ ಮುಖಂಡ ಶಾಂತವೇರಿ ವಸಂತ್ ಮಾತನಾಡಿದರು.

ಇಲ್ಲಿನ ಜೇಸಿ ವೇದಿಕೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್ ಸೇವಾದಳದ ಮಾಜಿ ತಾಲೂಕು ಅಧ್ಯಕ್ಷ ಬಸವರಾಜು, ದಸಂಸ ಮುಖಂಡ ಎಂ.ಪಿ. ಹೊನ್ನಪ್ಪ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಪುಟ್ಟರಾಜು, ತಾ.ಪಂ. ಸದಸ್ಯೆ ಕುಸುಮ, ಪದಾಧಿಕಾರಿಗಳಾದ ಜಾನಕಿ ವೆಂಕಟೇಶ್, ಎಸ್.ಎಂ. ಡಿಸಿಲ್ವಾ, ರಾಜಾರಾವ್, ಹೆಚ್.ಬಿ. ಜಯಮ್ಮ, ಬಗ್ಗನ ಅನಿಲ್ ಕುಮಾರ್, ಲೋಕೇಶ್, ಎಂ.ಡಿ. ದೇವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಹಾಡಿಗಳಲ್ಲಿ ಅರುಣ್ ಪರ ಸರಿತಾ ಪ್ರಚಾರ

ಮಡಿಕೇರಿ: ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಪರವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷೆ ಸರಿತಾ ಪೂಣಚ್ಚ ಅವರು ಬೆಂಬಲಿಗರೊಂದಿಗೆ ವಿವಿಧೆಡೆ ಪ್ರಚಾರ ಕೈಗೊಂಡರು.

ತಿತಿಮತಿ, ಅವರೆಗುಂದ ಹಾಡಿ, ಮಾಲ್ದಾರೆ, ಸಿದ್ದಾಪುರ, ಕಣ್ಣಂಗಾಲ, ಆಸ್ತಾನಹಾಡಿ, ದುಬಾರೆ ಹಾಡಿ, ತಟ್ಟಳ್ಳಿಹಾಡಿ ವಿಭಾಗದಲ್ಲಿ ಅವರು ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಸಂಪಾಜೆ-ಪೆರಾಜೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

ಸಂಪಾಜೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಸಂಪಾಜೆ, ಚೆಂಬು ಹಾಗೂ ಪೆರಾಜೆಯಲ್ಲಿ ಪ್ರಚಾರ ಸಭೆ ನಡೆಸಿದರು.

ಪೆರಾಜೆಯಲ್ಲಿ ಗಾಂಧಿ ಪ್ರಸಾದ್ ನೇತೃತ್ವದಲ್ಲಿ ರಾಧಾಕೃಷ್ಣ ಪೆರು ಮುಂಡ, ಗಣೇಶ ಬೆಳ್ಳಿಪ್ಪಾಡಿ, ನಾಗೇಶ ಕರೆಂದ್ಲಾಪಾಡಿ, ಶರತ್ ಬೊಳಂಜ, ಭವಿತ್ ಪೆರಾಂಗಾಜೆ, ಯೋಗಿಶ್ ಪೆರಂಗಾಜೆ, ಗಂಗಾಧರ ನಿಡ್ಚಿಲ್, ಪ್ರವೀಣ್ ಕೋಡಿ, ಕೃಷ್ಣಾ ಕೋಡಿ, ಜಯಪ್ರಕಾಶ್ ಹೊದ್ದೆಟಿ, ಚಿದಂಬರ ಹೊದ್ದೆಟಿ, ಅಶೋಕ ಹಲೆಕ್ಕಾಡಿ, ಶ್ರೀಧರ ಕುಂಡಾಡು, ರಂಜಿತ್ ಕುಂಡಾಡು, ಸಚಿನ್ ನಿಡ್ಯಮಲೆ, ಓಂ ಪ್ರಕಾಶ್ ನಿಡ್ಯಮಲೆ, ಆನಂದ ಕುತ್ತಿಮುಂಡ, ಮಂಜುನಾಥ ಕುಲಾಭಿ, ಪಿ.ಎಸ್.ಅಬ್ದುಲ್ಲಾ, ಶಂಕರ ಪೆರಾಜೆ, ತಿಲೋತ್ತಮ ದೊಡ್ಡಡ್ಕ, ಭವಾನಿಶಂಕರ ಅಡ್ಕ, ಲಿಂಗೇಶ್ವರ ಬಂಗಾರಕೋಡಿ, ಹರಿಪ್ರಸಾದ್ ಪೆರಾಂಗಜೆ, ಜ್ಞಾನೇಶ್ ಕೊಳಂಗಾಯ, ಶರತ್ ಪೆರಮುಂಡ, ರೋಹಿತ್ ಶರಾವರ ನಿಡ್ಯಮಲೆ, ಜೆಡಿಎಸ್ ನಿಂದ ಎನ್.ಕೆ. ಹಮೀದ್, ಎನ್.ಕೆ. ಅಬ್ದುಲ್ ರಹಿಮಾನ್, ಎನ್.ಕೆ. ಇಬ್ರಾಹಿಂ, ಎಂ.ಕೆ. ಅಬ್ದುಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಪ್ರಮುಖರಾದ ಸುಮಾ ವಸಂತ್, ಮಿಟ್ಟು ಚಂಗಪ್ಪ, ಶೈಲಜ ಪುಟ್ಟ, ಪಿ.ಎಲ್. ಸುರೇಶ್, ಜಯಪ್ರಕಾಶ್, ಮೊೈದು ಕೊಯನಾಡು, ಅಬುಸಾಲಿ, ಸೂರಜ್ ಹೊಸೂರು, ಎನ್.ಸಿ. ಮನೋಹರ, ಸುರೇಶ್ ಪಾಳ್ಯ, ಶ್ರೀನಿವಾಸ ನಿಡಿಂಜೆ ಮತ್ತಿತರರು ಹಾಜರಿದ್ದರು.

ಕೊಡ್ಲಿಪೇಟೆಯಲ್ಲಿ ಜೆ.ಡಿ.ಎಸ್. ಪ್ರಚಾರ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಜೆ.ಡಿ.ಎಸ್. ಮುಖಂಡರು ಹಾಗೂ ಕಾರ್ಯಕರ್ತರು ಬಿರುಸಿನ ಮತ ಪ್ರಚಾರ ನಡೆಸಿ, ಮಡಿಕೇರಿ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಪರ ಮತಯಾಚಿಸಿದರು. ಪ್ರತಿ ಮನೆ ಮನೆಗೆ, ಅಂಗಡಿ, ಹೊಟೇಲ್‍ಗಳಿಗೆ ತೆರಳಿ ಜೆ.ಡಿ.ಎಸ್.ನ ಕಾರ್ಯಸಾಧನೆಯನ್ನು ತಿಳಿಸಿ ಮತದಾರರ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭ ಜೆ.ಡಿ.ಎಸ್. ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಡಿ. ತಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಪ್ರಮುಖರಾದ ಕೆ.ಆರ್. ಚಂದ್ರಶೇಖರ್, ಸುಬ್ರಮಣ್ಯಾಚಾರ್, ಬಿಎಸ್‍ಪಿಯ ಜಯರಾಜ್, ಯುವ ಜನತಾದಳದ ಸಂಗಮೇಶ್, ಇಸ್ಮಾಯಿಲ್, ಅತ್ಲಫ್ ಹುಸೇನ್, ಜಗದೀಶ್, ಹೊನ್ನೇಗೌಡ, ಕಾಂತರಾಜ್ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.ಬಿಳಿಗೇರಿಯಲ್ಲಿ ಬಿಜೆಪಿ ಪ್ರಚಾರ

ಮಡಿಕೇರಿ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ಪರ ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರಚಾರ ಕಾರ್ಯ ನಡೆಸಿದರು.

ಮೇಕೇರಿ, ಬಿಳಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿದ ಪ್ರಮುಖರಾದ ಮಂಡುವಂಡ ಜೋಯಪ್ಪ, ಕಾಳೇಯಂಡ ಮನು ಕುಮಾರ್, ಪೈಕೇರ ಶಿವಪ್ರಸಾದ್, ಪರ್ಲಕೋಟಿ ಕಾವೇರಪ್ಪ, ಗ್ರಾ.ಪಂ. ಸದಸ್ಯರಾದ ಮಂಡುವಂಡ ವಾಣಿ ಚರ್ಮಣ, ಪೂಜಾರಿ ರಕ್ಷಿತ್ ಮತ್ತಿತರರು ಕೆ.ಜಿ. ಬೋಪಯ್ಯ ಅವರ ಪರ ಮತಯಾಚನೆ ಮಾಡಿದರು.

ಕೂಡಿಗೆಯಲ್ಲಿ ಚಂದ್ರಕಲಾ ಮತಯಾಚನೆ

ಕೂಡಿಗೆ: ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಮತಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಆಯಾ ಸರ್ಕಲ್‍ಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ಐದು ವರ್ಷಗಳ ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಮುಂದಿನ ಜನಪರ ಯೋಜನೆಗಳ ಬಗ್ಗೆ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು. ಮತಯಾಚನೆಯಲ್ಲಿ ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಟಿ.ಪಿ. ಹಮೀದ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪ ಹಾಗೂ ಕಾರ್ಯಕರ್ತರು ಇದ್ದರು.

ರಂಜನ್ ಪರ ಕೇಂದ್ರ ಸಚಿವರ ಪುತ್ರ ‘ಬ್ಯಾಟಿಂಗ್’

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪರ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಸೋಮವಾರಪೇಟೆ ತಾಲೂಕಿನ ಹಲವೆಡೆ ಮತ ಪ್ರಚಾರ ನಡೆಸಿದರು.

ಬಿ.ಜೆ.ಪಿ. ಪ್ರಮುಖರಾದ ಧರ್ಮ ನಾರಾಯಣ ಜೋಶಿ, ನಟಿ ಶುೃತಿ, ಅಭ್ಯರ್ಥಿ ಅಪ್ಪಚ್ಚು ರಂಜನ್, ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮತ್ತಿತರರು ಹಾಜರಿದ್ದರು.

ಬಿಜೆಪಿ ಪರ ಮತಯಾಚನೆ

ಕೂಡಿಗೆ: ಭಾರತೀಯ ಜನತಾ ಪಕ್ಷದ ತಾಲೂಕು ಎಸ್‍ಟಿ ಘಟಕದ ಅಧ್ಯಕ್ಷ ಪ್ರಭಾಕರ್ ಅವರ ನೇತೃತ್ವದಲ್ಲಿ ತೊರೆನೂರು, ಶಿರಂಗಾಲ, ಹಾಡಿಯ ಕೇಂದ್ರಗಳಾದ ಬಸವನಹಳ್ಳಿ, ಚಿನ್ನೇನಹಳ್ಳಿ, ಕೊಡ್ಲಿಪೇಟೆ, ಕೂಡಿಗೆ ವ್ಯಾಪ್ತಿಯ ಹುಣಸೆಪಾರೆ ಹಾಡಿಗಳಿಗೆ ತೆರಳಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪರ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಬಸವನಹಳ್ಳಿ ಸಹಕಾರ ಸಂಘದ ನಿರ್ದೇಶಕ ಮೋಹನ್, ತಾಲೂಕು ಘಟಕದ ನಿರ್ದೇಶಕರಾದ ದಿನೇಶ್, ಮಲ್ಲೇಶ್, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ತಾಲೂಕು ಎಸ್‍ಸಿ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತಯಾಚನೆಯಲ್ಲಿ ತೊಡಗಿದ್ದರು.

ಕಾಂಗ್ರೆಸ್‍ಗೆ ಆಯ್ಕೆ

ಮಡಿಕೇರಿ: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯನ್ನಾಗಿ ಎಂ.ಯು. ಕಲೀಲ್ ಬಾದಶಹ ಅವರನ್ನು ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಾಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಹಫೀಜ್ó ರಹಿಮಾನ್ ಖುರೈಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್. ವಿನು ಅವರನ್ನು ನೇಮಕ ಮಾಡಲಾಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಇ. ಮ್ಯಾಥ್ಯು ತಿಳಿಸಿದ್ದಾರೆ.

ಜೆ.ಡಿ.ಎಸ್.ಗೆ ಆಯ್ಕೆ

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಹಿಂದುಳಿದ ವರ್ಗ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್. ಸಂದೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಎನ್.ಸಿ. ಸುನಿಲ್ ತಿಳಿಸಿದ್ದಾರೆ.