ಮಡಿಕೇರಿ, ಮೇ 10: ಮಡಿಕೇರಿಯ ವೆಲ್ಡರ್ಸ್ ಫ್ಯಾಬ್ರಿಕೇಟರ್ಸ್ ಅಸೋಸಿಯೇಷನ್ನ ವಾರ್ಷಿಕ ಮಹಾಸಭೆ ಮಧನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ವರ್ಷದ ವರದಿಯನ್ನು ಸಲ್ಲಿಸಿ ಅನುಮೋದನೆ ಪಡೆಯಲಾಯಿತು.
ಉಪಾಧ್ಯಕ್ಷ ಅಬ್ರಹಾರ್ ಮಾತನಾಡಿ, ಸಂಘದಲ್ಲಿ ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗಿ ಸಂಘದ ಪದಾಧಿಕಾರಿಗಳಲ್ಲಿ ಕೇಳಿಕೊಂಡರು.
ಖಜಾಂಚಿ ಅಶ್ರಫ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡರು. ಇದೇ ಸಂದರ್ಭ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮಾರ್ಟಿನ್ ಪಿ.ಟಿ., ಉಪಾಧ್ಯಕ್ಷರಾಗಿ ಮೊಹಮ್ಮದಾಲಿ ಎಂ.ಐ., ಕಾರ್ಯದರ್ಶಿಯಾಗಿ ಎ.ಆರ್. ಮಂಜುನಾಥ್, ಸಹಕಾರ್ಯದರ್ಶಿಯಾಗಿ ಇಮ್ರಾನ್ ಶರೀಫ್, ಖಜಾಂಚಿಯಾಗಿ ಸುಲೈಮಾನ್ ಎಂ.ಹೆಚ್., ಸಹ ಖಜಾಂಚಿಯಾಗಿ ಎಂ.ಎಂ. ರಫೀಕ್, ಸಮಿತಿ ಸದಸ್ಯರಾಗಿ ಸುಕುಮಾರ್ ಕೆ.ಬಿ., ಮೋಹನ್ ಕೆ.ಎಸ್. ಫರೀದ್, ಶಾದಿಕ್, ಅಸ್ಲಾಮ್, ಗೌರವ ಅಧ್ಯಕ್ಷರಾಗಿ ಮಧನ್ ಕುಮಾರ್, ಸಲಹೆಗಾರರಾಗಿ ಜಗದೀಶ್ ಜಿ.ಸಿ., ಅಬ್ರಾರ್, ಅಶ್ರಫ್ ಆಯ್ಕೆಯಾಗಿದ್ದಾರೆ.