ಮಡಿಕೇರಿ, ಮೇ 11: ಮಾರ್ಚ್-ಏಪ್ರಿಲ್ - 2018 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವದನ್ನು ರದ್ದುಪಡಿಸಲಾಗಿದೆ. ಈ ಸಂಬಂಧ ನಿರ್ದೇಶಕರು ಪರೀಕ್ಷೆಗಳು ಕ.ಪ್ರೌ.ಶಿ.ಪ. ಮಂಡಳಿ ಬೆಂಗಳೂರು ಇವರ ಆದೇಶದಂತೆ ಪ್ರಸ್ತುತ ಸಾಲಿನಿಂದ ಮಾರ್ಚ್-ಏಪ್ರಿಲ್ - 2018 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾಪ್ರತಿ ಹಾಗೂ ಮರು ಮೌಲ್ಯಮಾಪನಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಮಂಡಳಿಯ ಜಾಲತಾಣದಲ್ಲಿ ವ್ಯವಹರಿಸಬೇಕಿದೆ.ತಿತಿತಿ.ಞseeb.ಞಚಿಡಿ.ಟಿiಛಿ.iಟಿ ಲಭ್ಯವಿದ್ದು, ಸದರಿ ಜಾಲತಾಣದಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರುಗಳಿಗೆ ಈ ಬಗ್ಗೆ ಹತ್ತಿರದ ಶಾಲೆಗಳಲ್ಲಿ ಹೆಚ್ಚಿನ ಮಾಹಿತಿ ಪಡೆದು ಅಗತ್ಯ ಸೇವೆ ಪಡೆದುಕೊಳ್ಳಲು ಇಲಾಖಾ ಪ್ರಕಟಣೆ ತಿಳಿಸಿದೆ