ಮಡಿಕೇರಿ, ಮೇ 11: ನೆಲ್ಲಿಹುದಿಕೇರಿಯ ನಲ್ವತೇಕರೆಯಲ್ಲಿ ಇತ್ತೀಚೆಗೆ ನಬಾರ್ಡ್ ಹಾಗೂ ಓಡಿಪಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ವಾಸು ಉದ್ಘಾಟಿಸಿ ಎಲ್ಲರೂ ಬ್ಯಾಂಕಿನಲ್ಲಿ ವ್ಯವಹಾರ ಮಾಡಬೇಕು ಹಾಗೂ ಖಾತೆಯನ್ನು ಹೊಂದಿರಬೇಕೆಂಬದರ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಪೋರೇಷನ್ ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅಧಿಕಾರಿ ಶುಭ ಭಾಗವಹಿಸಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಓ.ಡಿ.ಪಿ. ಸಂಸ್ಥೆಯ ವಲಯ ಸಂಯೋಜಕಿ ಜಾಯ್ಸ್ ಮೇನೆಜಸ್, ಕಾರ್ಯಕರ್ತೆ ವಿಜಯ ನಾರಾಯಣ ಹಾಗೂ ಸಂಘದ ನಾಯಕರು ಪಾಲ್ಗೊಂಡಿದ್ದರು. ವಿಲಾಸಿನಿ ಸ್ವಾಗತಿಸಿ, ಆಯಿಷ ವಂದಿಸಿದರು.