*ಗೋಣಿಕೊಪ್ಪಲು, ಮೇ 16: ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರು ರೆಜಿಮೆಂಟಿನ ಎನ್‍ಸಿಸಿ ಶಿಬಿರ ತಾ. 17 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ. 10 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕೊಡಗು ಜಿಲ್ಲೆಯ ಎನ್‍ಸಿಸಿ ಕೆಡೆಟ್‍ಗಳಲ್ಲದೆ ಸುಳ್ಯ, ಪುತ್ತೂರಿನ ವಿವಿಧ ಕಾಲೇಜುಗಳ 600 ಕೆಡೆಟ್‍ಗಳು ಪಾಲ್ಗೊಳ್ಳಲಿದ್ದಾರೆ.ಶಿಬಿರದ ಮುಖ್ಯಸ್ಥರಾಗಿ ಮಡಿಕೇರಿಯ ಎನ್‍ಸಿಸಿ ಆಫೀಸರ್ ರಮಾಸಿಂಗ್, ಕರ್ನಲ್ ವಿ.ಎಂ.ನಾಯ್ಕ, ಉಪ ಮುಖ್ಯಸ್ಥರಾದ ಲೆಫ್ಟಿನೆಂಟ್ ಕರ್ನಲ್ ಸಂಜಯ್ ಆಪ್ಟೆ ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ಫೈರಿಂಗ್, ಡ್ರಿಲ್, ಸಶಸ್ತ್ರ ತರಬೇತಿ, ಮ್ಯಾಪ್ ರೀಡಿಂಗ್ ಹಾಗೂ ವೈವಿಧ್ಯಮಯವಾದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ.ಶಿಬಿರಕ್ಕೆ ಮಂಗಳೂರು ಗ್ರೂಪ್ ಕಮಾಂಡರ್ ಹಾಗೂ ಕರ್ನಾಟಕ ಮತ್ತು ಗೋವಾ ರಾಜ್ಯದ ಎನ್‍ಸಿಸಿ ಮುಖ್ಯಸ್ಥರು ಭೇಟಿ ನೀಡುವ ಸಾಧ್ಯತೆ ಇದೆ. ಕಾಪ್ಸ್‍ನಲ್ಲಿ ಈ ಹಿಂದೆ ಎರಡು ಬಾರಿ ರಾಷ್ಟ್ರೀಯ ಎನ್‍ಸಿಸಿ ಶಿಬಿರಗಳನ್ನು ಅಚ್ಚುಕಟ್ಟಾಗಿ ನಡೆಸಲಾಗಿದೆ ಎಂದು ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್, ಎನ್‍ಸಿಸಿ ಅಧಿಕಾರಿ ಬಿ.ಎಂ. ಗಣೇಶ್ ತಿಳಿಸಿದ್ದಾರೆ.