ಎಸ್.ಎಸ್.ಎಲ್.ಸಿ. ಅಂದಾಕ್ಷಣ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಟರ್ನಿಂಗ್ ಪಾಂಯಿಂಟ್ ಎಂದೇ ಬಿಂಬಿತವಾಗಿದೆ. ಪರೀಕ್ಷೆಗಳು ಮುಗಿದು ರಿಸೆಲ್ಟ್‍ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಫಲಿತಾಂಶಕ್ಕಾಗಿ ಕಾಯುವುದೂ ಒಂದು ಬೆಚ್ಚಗಿನ ಅನುಭವ. ಫಲಿತಾಂಶವೇನೋ ಪ್ರಕಟಗೊಂಡಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಗೆಲುವು-ಸೋಲುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಸ್ಥಿತಿಯನ್ನು ಮೊದಲೇ ರೂಢಿಸಿಕೊಳ್ಳಬೇಕಾಗುತ್ತದೆ.ಹೀಗೆ ಮಾಡಿದಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಶಿಕ್ಷಕರ ಆತಂಕಗಳು ಒಂದಷ್ಟು ಮಟ್ಟಿಗೆ ತಹಬದಿಗೆ ಬರುತ್ತವೆ.
ಎಸ್.ಎಸ್.ಎಲ್.ಸಿ. ಪಾಸಾದರೆ ಒಂದೇ ದಾರಿ ಅದೇನೆಂದರೆ ಅದು ಜೀವನದಲ್ಲಿ ಕೇವಲ ಓದಲೇ ಬೇಕು. ಆದರೆ, ಫೇಲಾದರೆ ಬದುಕಲಿಕ್ಕೆ ಸಾವಿರ ದಾರಿಗಳಿವೆ. ‘ಓದುವಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಗಾದೆಯು ಹುಟ್ಟಿದ್ದು ಇದೇ ಕಾರಣಕ್ಕಾಗಿ. ಇರಲಿ, ಎಸ್.ಎಸ್.ಎಲ್.ಸಿ. ನಂತರ ವಿದ್ಯಾರ್ಥಿಗಳ ಆಯ್ಕೆಗಳೇನು ಎಂಬುದನ್ನು ಗಮನಿಸಿದಾಗ ಕ್ರಮವಾಗಿ ಪಿ.ಯು.ಸಿ., ಐ.ಟಿ.ಐ, ಡಿಪ್ಲೊಮೋ ಕೋರ್ಸ್ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳು ಗಮನವನ್ನು ಸೆಳೆಯುತ್ತವೆ. ಪಿ.ಯು.ಸಿ. 2 ವರ್ಷದ ಕೋರ್ಸ್‍ನಲ್ಲಿ ವಿಜ್ಞಾನ, ಕಲಾ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗಗಳಿವೆ. ನಂತರ ಪಾಲಿಟೆಕ್‍ನಿಕ್‍ಡಿಪ್ಲೊಮೋ 3 ವರ್ಷದ ಕೋರ್ಸ್ ಇದ್ದು, ಇದರಲ್ಲಿ 33 ತರಹದ ಟೆಕ್ನಿಕಲ್ ವಿಭಾಗಗಳು ಮತ್ತು ವಿದ್ಯಾರ್ಥಿನಿಯರಿಗಾಗಿ 6 ತರಹದ ನಾನ್‍ಟೆಕ್ನಿಕಲ್ ವಿಭಾಗಗಳಿವೆ. ನಂತರ ಪ್ಯಾರಾಮೆಡಿಕಲ್ ಡಿಪ್ಲೊಮೋ 3 ವರ್ಷದ ಕೋರ್ಸ್ ಆಗಿದ್ದು ಇದರಲ್ಲಿ 14 ವಿಭಾಗಗಳಿವೆ ಮತ್ತು ಐ.ಟಿ.ಐ 2 ವರ್ಷದ ಡಿಪ್ಲೊಮೋದಲ್ಲಿ 36 ತರಹದ ವಿಭಾಗಗಳಿವೆ ಇನ್ನು 6 ತಿಂಗಳಿಂದ 1 ವರ್ಷದ ಜಾಬ್ ಓರಿಯಂಟೆಡ್ ಕೋರ್ಸ್‍ಗಳಲ್ಲಿ
17 ತರಹದ ವಿಭಾಗಗಳು ಲಭ್ಯವಿದೆ ಮತ್ತು ಬೋಸೆಕ್, ಟೊಯೋಟಾ, ವಾಲ್‍ಕಸ್‍ಗೋವನ್ ಕಂಪನಿಗಳಲ್ಲಿ ಅಪರೆಂಟಿಶಿಪ್ ಪ್ರೋಗ್ರಾಂಗಳು ಲಭ್ಯವಿದೆ ಹಾಗೂ ಸರ್ಕಾರಿ ರೈಲ್ವೇ ಡಿಫೆನ್ಸ್‍ನಲ್ಲಿ 17
ತರಹದ ಜಾಬ್ ಇವೆ. ದೂರ ಶಿಕ್ಷಣ ವಿಭಾಗದಲ್ಲಿ 18 ತರಹದ ಕೋರ್ಸ್‍ಗಳು ಲಭ್ಯವಿದೆ. ನಂತರ ಎಸ್.ಎಸ್.ಎಲ್.ಸಿ. ಆದ ಮೇಲೆ ಎಲ್.ಐ.ಸಿ. ಏಜೆಂಟ್ ಆಗಲಿಕ್ಕೂ ಅವಕಾಶವಿದೆ. ಎಸ್.ಎಸ್.ಎಲ್.ಸಿ. ನಂತರ ಪೈನ್‍ಆಟ್ರ್ಸ್ ಮತ್ತು ಕಮರ್ಶಿಯಲ್ ಆಟ್ರ್ಸ್ ವಿಭಾಗಗಳಲ್ಲಿ ಅವಕಾಶಗಳಿವೆ. ರೈಲ್ವೆ ಟಿಕೆಟ್‍ಕಲೆಕ್ಟರ್ ಹಾಗೂ ಕಾಮರ್ಸ್ ಕ್ಲರ್ಕ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶಗಳಿವೆ. ಬ್ಯಾಂಕ್ ಹಾಗೂ ಇನ್‍ಶೂರೆನ್ಸ್ ಸೆಕ್ಟರ್‍ಗಳಲ್ಲಿ ಕ್ಲರಿಕಲ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶಗಳಿದೆ. ಡಿಪ್ಲೊಮೋ ಇನ್‍ಡ್ಯಾನ್ಸ್ &amdiv; ಮ್ಯೂಸಿಕ್, ಸೆರ್‍ಟಿಫೈಡ್ ಬಿಲ್ಡಿಂಗ್ ಸೂಪ್ರವೈಸರ್, ಡಿಪ್ಲೊಮೋ ಇನ್ ಅನಿಮಲ್‍ಹಸ್‍ಬೆಂಡ್ರಿ, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿನ್, ಇಂಟೀರಿಯರ್ ಡಿಸೈನ್, ಸ್ಟೆನೋಗ್ರಾಫೀ, ಬ್ಯೂಟಿಪಾಲರ್, ಗಾರ್ಮೆಂಟ್ ಟೆಕ್ನಾಲಜಿ, ಡಾಟಾ ಎಂಟ್ರಿ ಆಪರೇಟರ್, ಟೈಲರಿಂಗ್ ಡಿಪ್ಲೊಮೋ ಹೀಗೆ ಒಟ್ಟಾರೆ ಎಸ್.ಎಸ್.ಎಲ್.ಸಿ. ಮುಗಿದ ನಂತರ 14 ತರಹದ ವಿಭಾಗಗಳಲ್ಲಿ 122 ಕೋರ್ಸ್‍ಗಳು ಲಭ್ಯವಿರುತ್ತವೆ. ಇನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳು ಚಿಂತೆ ಬಿಟ್ಟಾಕಿ ಯಾವ ಯಾವ ವಿಷಯಗಳಲ್ಲಿ ಅನುತ್ತೀರ್ಣ ಆಗಿದೆ ಎನ್ನುವುದನ್ನು ನೋಡಿಕೊಂಡು ಬೇಗ ಬೇಗನೇ ಜೂನ್‍ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ತಯಾರಿ ನೆಡೆಸಲು ಬಿಂದಾಸ್ ಆಗಿ ಪರೀಕ್ಷಾ ಶುಲ್ಕ ತುಂಬಿ ಪರೀಕ್ಷಾ ಸಿದ್ದತೆ ನೆಡೆಸುವುದು ಜಾಣರ ಲಕ್ಷಣ.
ಕೋರ್ಸ್‍ಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮುಂದೆ ನೀವು ಏನಾಗಬೇಕೆಂದು ಬಯಸಿದ್ದೀರಿ ಎಂಬುದನ್ನು ಅರಿತು ಕೊಂಡು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮತ್ತು ಅತಿ ಹೆಚ್ಚು ಅಂಕಗಳಿಸಿದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು ವಿದ್ಯಾರ್ಥಿಯ ವೈಯಕ್ತಿಕ ಆಸಕ್ತಿ ಯಾವ ಏರಿಯಾದಲ್ಲಿದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಂಡು ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಪ್ರಶಸ್ತವಾದುದು ಈ ಕುರಿತು ಎಲ್ಲಾ ಆಯಾಮಗಳಲ್ಲೂ ಸರಿಯಾದ ಮಾಹಿತಿಯನ್ನು ಪಡೆದು ನಂತರ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ. ಕೋರ್ಸ್‍ಗಳ ಆಯ್ಕೆ ಹಾಗೂ ಇನ್ನಿತರೆ ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು ಸಂಪರ್ಕಿಸಬಹುದಾಗಿದೆ.
? ಬಿ. ಎಂ. ದಾರುಕೇಶ, ಶಿಕ್ಷಣಾಧಿಕಾರಿಗಳು
ಚಿತ್ರದುರ್ಗ, ಮೊ. 9886229378