ಮಡಿಕೇರಿ, ಮೇ 15 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಪರೂಪದ ಪಕ್ಷಿಗಳ ರಕ್ಷಣೆಗಾಗಿ ಬೇಸಿಗೆ ಕಾಲದಲ್ಲಿ ಅವುಗಳ ನೀರಿನ ದಾಹ ನೀಗಿಸುವ “ಪಕ್ಷಿ ಸಂಕುಲ”ವನ್ನು ಸಂರಕ್ಷಿಸುವ ಸಲುವಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿದೆ.

ಮನೆಯ ಮಹಡಿಯ ಮೇಲೆ ತೆರೆದ ಸ್ಥಳಗಳಲ್ಲಿ, ಮರ-ಗಿಡಗಳಲ್ಲಿ, ನೀರು-ಆಹಾರ ಪೂರೈಕೆಯ ಸಾಧನ, ಬಾಟಲ್, ಪಾತ್ರೆಗಳನ್ನಿಟ್ಟು ಪಕ್ಷಿಗಳ ಹಸಿವು, ದಾಹ ನೀಗಿಸಿ, ಪಕ್ಷಿಗಳ ಉಳಿವಿಗಾಗಿ ಕೃತಕ ಗೂಡುಗಳನ್ನು ಸಿದ್ಧಪಡಿಸಿ ಅವುಗಳಿಗೆ ಅನುಕೂಲ ಮಾಡಬೇಕು.

ಬೇಟೆಯ ಹೆಸರಿನಲ್ಲಿ ಪ್ರಾಣಿ-ಪಕ್ಷಿಗಳನ್ನು ಬಲಿ ಕೊಡದೆ ಅವುಗಳ ಸಂತತಿ ಉಳಿಸಬೇಕು ಹಾಗೂ ಅವನತಿಯ ಅಂಚಿನಲ್ಲಿರುವ ಪಕ್ಷಿಗಳ ರಕ್ಷಣೆಗೆ ಪಣ ತೋಡಬೇಕು ಮತ್ತು ಜನಸಾಮಾನ್ಯರು, ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ಪ್ರೀಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಬಿ.ಕಡ್ಲೇವಾಡ ಅವರು ತಿಳಿಸಿದ್ದಾರೆ.