ನಾಪೆÉÇೀಕ್ಲು, ಮೇ. 16: ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೀವಿಜಯ ಸೋಲಿಗೆ ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡರೇ ಕಾರಣ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಆರೋಪಿಸಿದ್ದಾರೆ.
ಮುಸ್ಲಿಂ ಒಕ್ಕೂಟ ಎಂಬ ಹೆಸರಿನಲ್ಲಿ ಹಿರಿಯ ಅಲ್ಪಸಂಖ್ಯಾತ ನಾಯಕರು ಎಲ್ಲಾ ಮಸೀದಿಗಳಿಗೆ ಭೇಟಿ ನೀಡಿ ಜೆಡಿಎಸ್‍ಗೆ ಮತ ಹಾಕಬೇಡಿ ಕಾಂಗ್ರೆಸ್‍ಗೆ ಮತ ಹಾಕಿ ಎಂದು ಪ್ರೇರೇಪಿಸಿ ಬಡವರ್ಗದವರಿಗೆ ಪೊಳ್ಳು ಭರವಸೆ ನೀಡಿರುವದರಿಂದ ಅಲ್ಪಸಂಖ್ಯಾತರ ಮತ ವಿಭಜನೆಗೊಂಡು ನಿಷ್ಠಾವಂತ ನಾಯಕ ಜೀವಿಜಯ ಸೋಲಿಗೆ ಕಾರಣವಾಗಿದೆ ಎಂದರು. ಇದರಿಂದ ಅಲ್ಪಸಂಖ್ಯಾತ ಬಂಧುಗಳು ಪಾಠ ಕಲಿಯಬೇಕಾಗಿದೆ ಎಂದರು