ಗೋಣಿಕೊಪ್ಪ ವರದಿ, ಮೇ 15: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ತಾ. 17 ರಿಂದ 26 ರವರೆಗೆ ಎನ್.ಸಿ.ಸಿ. ಶಿಬಿರ ನಡೆಯಲಿದೆ. ಶಿಬಿರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಳ್ಯ ಮತ್ತು ಪುತ್ತೂರು ಶಾಲಾ ಕಾಲೇಜಿನ ಸುಮಾರು 600 ಎನ್.ಸಿ.ಸಿ ಕೆಡೆಟ್‍ಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಫೈರಿಂಗ್, ಡ್ರಿಲ್, ಮ್ಯಾಪ್ ರೀಡಿಂಗ್ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ವಿವಿಧ ತರಬೇತಿಗಳು ನೀಡಲಾಗುತ್ತದೆ. ಶಿಬಿರದ ಮುಖ್ಯಸ್ಥ ವಿ.ಎಮ್ ನಾಯ್ಕ್, ಉಪಮುಖ್ಯಸ್ಥ ಸಂಜಯ್ ಮತ್ತು ಎನ್.ಸಿ.ಸಿ ಅಧಿಕಾರಿಗಳು ಭಾಗವಹಿಸಿ ತರಬೇತಿ ನೀಡಲಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.