ವೀರಾಜಪೇಟೆ, ಮೆ 15: ಹಲವು ದಿನಗಳಿಂದ ನರಕ್ಕೆ ಸಂಬಂಧಿಸಿದಂತೆ ಕಾಯಿಲೆಗೆ ತುತ್ತಾಗಿದ್ದ ವೃದ್ಧೆ ಮಹಿಳೆಯು ತೋಟದ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ವೀರಾಜಪೇಟೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ. ಬೊಯಿಕೇರಿ ನಿವಾಸಿ ದಿವಂಗತ ಅಮ್ಮಣಿಚಂಡ ಪೂವಯ್ಯ ಅವರ ಧರ್ಮಪತ್ನಿ ದೇವಕ್ಕಿ (83) ಅತ್ಮಹತ್ಯೆ ಮಾಡಿಕೊಂಡಿರುವರಾಗಿದ್ದು, ಮಗ ಅಮ್ಮಣಿಚಂಡ ಕುಶಾಲಪ್ಪ ನೀಡಿದ್ದ ದೂರಿನ ಮೇರೆ ಮೃತ ದೇಹವನ್ನು ಸರ್ಕಾರಿ ಅಸ್ಪತ್ರೆಯಲ್ಲಿ ಶವ ಪರಿಕ್ಷೆ ಮಾಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.