ಮಡಿಕೇರಿ, ಮೇ 17: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ತಾ. 18 ರಂದು (ಇಂದು) ಮತ್ತು ತಾ. 19 ರಂದು (ನಾಳೆ) ಎರಡನೇ ಚಂಡಿಕಾ ಯಾಗ ಹಾಗೂ ನೃತ್ಯೋತ್ಸವ ನಡೆಯಲಿದೆ.

ತಾ. 18 ರಂದು ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದ್ದು, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ದೇವಾಲಯ ಸಂಸ್ಥಾಪಕರಾದ ಮಹಾಬಲೇಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ವಿ.ಟಿ. ಶ್ರೀನಿವಾಸ್ ಹಾಗೂ ಚೌರೀರ ತಿಮ್ಮಯ್ಯ ಅವರುಗಳನ್ನು ಸನ್ಮಾನಿಸಲಾಗುತ್ತದೆ. ಬಳಿಕ ನೃತ್ಯೋತ್ಸವ ಹಾಗೂ ಭರತನಾಟ್ಯೋತ್ಸವ ಮತ್ತು ಅನ್ನಸಂತರ್ಪಣೆ ನೆರವೇರಲಿದೆ. ತಾ. 19 ರಂದು ಪೂಜಾ ಕಾರ್ಯಕ್ರಮಗಳೊಂದಿಗೆ ಮದ್ಯಾಹ್ನ ಅನ್ನದಾನ ನಡೆಯಲಿದೆ.