ಮಡಿಕೇರಿ, ಮೇ 17: ಜಿಲ್ಲೆಯ ಖಜಾನೆ ಇಲಾಖೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಹೆಚ್.ಹೆಚ್. ವರ್ಚಸ್ವಿ ಅವರು ತಾ. 1.1.2018 ರಿಂದ ಕಚೇರಿಗೆ ಅನಧಿಕೃತ ಗೈರು ಹಾಜರಾಗಿದ್ದು, ಈ ಬಗ್ಗೆ ತಾ. 17.1.2018 ರಂದು ಕಚೇರಿಗೆ ಹಾಜರಾಗುವಂತೆ ಕಳುಹಿಸಿದ್ದ ನೋಟಿಸ್ ಪತ್ರಕ್ಕೆ ಯಾವದೇ ಪ್ರತಿಕ್ರಿಯೆ ಬಂದಿರುವದಿಲ್ಲ. ತಾ. 14.3.2018 ರಂದು ಕಳುಹಿಸಿದ ನೋಟಿಸ್ ಸ್ವೀಕೃತವಾಗದೇ ವಾಪಸ್ ಬಂದಿರುತ್ತದೆ. ಒಬ್ಬ ಸರ್ಕಾರಿ ನೌಕರರಾಗಿದ್ದು, ಕಚೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದು, ತಕ್ಷಣ ಕಚೇರಿಗೆ ಹಾಜರಾಗಲು ಸೂಚಿಸಿದೆ. ತಪ್ಪಿದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ಅನ್ವಯ ಶಿಸ್ತು ಕ್ರಮಕ್ಕಾಗಿ ಶಿಸ್ತು ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಜಿಲ್ಲಾ ಖಜಾನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.