ಮಡಿಕೇರಿ, ಮೇ 17: ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿ ಮತಯಾಚಿಸಿದ್ದು, ತನಗೆ ಪ್ರಾಮಾಣಿಕ ಮತಗಳು ಬಂದಿವೆ ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಸಮರ್ಥಿಸಿಕೊಂಡಿದ್ದಾರೆ.ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಮಿಷವೊಡ್ಡಿ ಮತಯಾಚಿಸಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಯದ್ದು ಜನಮತದ ಗೆಲುವಲ್ಲ. ಕಾಂಗ್ರೆಸ್‍ಗೆ ಬರಬೇಕಿದ್ದ ಬಹುಪಾಲು ಮತಗಳನ್ನು ಬಿಜೆಪಿ ತಡೆದಿದೆ. ಅಧಿಕಾರಿಗಳು ಹಾಗೂ ಪೊಲೀಸರು ಬಿಜೆಪಿ ಪರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಹೆಬ್ಬಾಲೆ ಕ್ಷೇತ್ರದಲ್ಲಿ ಸುಮಾರು 12 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಅಲ್ಲಿನ ಮತದಾರರು ನನಗೆ ಮತ ನೀಡದೆ ದ್ರೋಹವೆಸಗಿದ್ದಾರೆ ಎಂದು ದೂರಿದರು.

ಜೀವಿಜಯಗೆ ಕಾಂಗ್ರೆಸ್ ಟಿಕೆಟ್ !

ಬಿಜೆಪಿಯನ್ನು ಸೋಲಿಸಲೇಬೇಕೆಂದು ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಕೆಪಿಸಿಸಿ ಮುಖಂಡರು ನಿರ್ಧರಿಸಿದ್ದರು. ಈ ಬಗ್ಗೆ ನಾನು ಖುದ್ದು ಜೀವಿಜಯ ಅವರ ಮನೆಗೆ ತೆರಳಿ ಪ್ರಸ್ತಾಪಿಸಿದರೂ ಜೀವಿಜಯ ಅವರು ನಿರ್ಲಕ್ಷಿಸಿದರು. ಅವರು ಕಾಂಗ್ರೆಸ್ ಮೂಲಕ ಸ್ಪರ್ಧಿಸಿದ್ದರೆ ಶಾಸಕರಾಗುತ್ತಿದ್ದರು. ಅಲ್ಲದೆ, ನನಗೂ ಒಂದು ಅಧಿಕಾರ ಸಿಗುತ್ತಿತ್ತು. ಆದರೆ, ಒಕ್ಕಲಿಗ ಸಮುದಾಯದÀ ಇಬ್ಬರೂ ಸೋತಿರುವದು ದುಃಖ ತಂದಿದೆ ಎಂದು ಚಂದ್ರಕಲಾ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‍ನ ಕೆಲ ನಾಯಕರ ಅಸಹಕಾರದಿಂದ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಇವರ ವಿರುದ್ಧ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದೇನೆ.

ವಕೀಲರೊಬ್ಬರು ನಾನು ಬಿಜೆಪಿಯಿಂದ 2 ಕೋಟಿ ರೂ. ಪಡೆದಿದ್ದೇನೆ ಮತ್ತು ನಾನು ಲಿಂಗಾಯಿತ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡಿದ್ದು, ಇವರ ವಿರುದ್ಧ ದೂರು ನೀಡಿರುವದಾಗಿ ಚಂದ್ರಕಲಾ ಇದೇ ಸಂದರ್ಭ ತಿಳಿಸಿದರು. ಇವರ ಅಪಪ್ರಚಾರವು ನನ್ನ ಸೋಲಿಗೆ ಕಾರಣವೆಂದು ಅಭಿಪ್ರಾಯಪಟ್ಟ ಅವರು, ಅಪಪ್ರಚಾರ ಮಾಡಿದ ವಕೀಲ ಯಾವದೇ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲಿ, ನಾನು ಕೂಡ ಪ್ರಮಾಣ ಮಾಡಲು ಸಿದ್ಧಳಿದ್ದೇನೆ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರಾ ಹಫೀಜ್ó, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಹಾಗೂ ಎಸ್‍ಟಿ ಘಟಕದ ಪ್ರಮುಖರಾದ ವಸಂತ ಉಪಸ್ಥಿತರಿದ್ದರು.