ಕೂಡಿಗೆ, ಮೇ 17: ಹಾರಂಗಿ ಜಲಾಶಯದ ಜಲಾನಯನ ಪ್ರದೇಶಗಳಿಗೆ ಒಳಪಡುವ ವ್ಯಾಪ್ತಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಹಾರಂಗಿ ಜಲಾಶಯದಿಂದ ಕಳೆದ ರಾತ್ರಿಯಿಂದ ವಿದ್ಯುತ್ ಘಟಕದ ಮೂಲಕ 2500 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ. ಈಗಾಗಲೇ ಹಾರಂಗಿ ಜಲಾನಯನ ಮೇಲ್ಭಾಗದ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದು, ಅಲ್ಪ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಿದ್ದರೂ ಕುಡಿಯುವ ನೀರಿಗಾಗಿ ಹಾರಂಗಿಯಿಂದ ಕೆ.ಆರ್.ಎಸ್.ವರೆಗಿನ ಪ್ರದೇಶಗಳಿಗೆ ನೀರನ್ನು ಹರಿಸಲಾಗಿದೆ.