ಮಡಿಕೇರಿ, ಮೇ 18: ಏಷ್ಯನ್ ಹಾಕಿ ಫೆಡರೇಷನ್ ವತಿಯಿಂದ ಕೊರಿಯಾದ ಡೋಂಗೆ ಸಿಟಿಯಲ್ಲಿ ನಡೆಯುತ್ತಿರುವ ಡೋಂಗೆ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ -2018 ಪಂದ್ಯಾವಳಿಯ ಜಡ್ಜ್ ಆಗಿ ಪುಳ್ಳಂಗಡ ರೋಹಿಣಿ ಬೋಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈಕೆ ಇದೀಗ ಕೊರಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹಿಣಿ (ತಾಮಲೆ ನೆಲ್ಲಮಕ್ಕಡ) ಅಂತರರಾಷ್ಟ್ರೀಯ ಹಾಕಿ ಆಟಗಾರರಾಗಿರುವ ಪುಳ್ಳಂಗಡ ಬಿ. ಉಪೇಂದ್ರ ಹಾಗೂ ಕಾವೇರಿ ದಂಪತಿಯ ಪುತ್ರ ಇದೀಗ ಬಿಪಿಸಿಎಲ್ನಲ್ಲಿರುವ ಬೋಪಣ್ಣ ಅವರ ಪತ್ನಿ.