ಮಡಿಕೇರಿ, ಮೇ 19 : ಕಾಂಗ್ರೆಸ್ನ ಕೆಲವು ನಾಯಕರು ಜೆಡಿಎಸ್ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೆ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವೆಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಕೆಲವು ನಾಯಕರುಗಳೆ ಕೆ.ಪಿ.ಚಂದ್ರಕಲಾ ಅವರನ್ನು ದುರ್ಬಲ ಅಭ್ಯರ್ಥಿ ಎಂದು ಪ್ರತಿಬಿಂಬಿಸಿದರು. ಅಲ್ಲದೆ, ಆರ್ಥಿಕ ಸಹಕಾರ ಕೂಡ ಸಿಗಲಿಲ್ಲ. ಬೆಂಗಳೂರಿ ನಲ್ಲಿದ್ದ ತಮ್ಮ ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ಅಭ್ಯರ್ಥಿಗೆ ಬಂದಿತ್ತೆಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಬೆÉೀರು ಮಟ್ಟದಲ್ಲಿಯೆ ಬದಲಾವಣೆಯಾಗ ಬೇಕಾಗಿದ್ದು, ಯುವ ಶಕ್ತಿ ಮತ್ತು ನವಚೇತನವನ್ನು ತುಂಬುವ ಅಗತ್ಯವಿದೆ ಎಂದರು. ಬೇರೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಕಾಂಗ್ರೆಸ್ ಪಕ್ಷ ತೊರೆಯಲಿ ಎಂದು ಒತ್ತಾಯಿಸಿದ ಅವರು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿ ಪೈಪೋಟಿಯನ್ನು ನೀಡಲು ಅಗತ್ಯವಿರುವ ಬಲವರ್ಧನೆ ಯನ್ನು ಕಾರ್ಯಕರ್ತರ ಮೂಲಕ ಮಾಡಲಾಗುವದೆಂದು ಹೇಳಿದರು.
ಕುಶಾಲನಗರ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಶೇ.50ಕ್ಕೂ ಅಧಿಕ ಮತಗಳ ಮುನ್ನಡೆಯನ್ನು ಸಾಧಿಸಿದ್ದು, ಜೆಡಿಎಸ್ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಪಕ್ಷದ ಪದಾಧಿಕಾರಿಗಳ ವಿರುದ್ಧ ಹೈಕಮಾಂಡ್ಗೆ ವರದಿ ಸಲ್ಲಿಸಿರುವ ದಾಗಿ ವಿ.ಪಿ. ಶಶಿಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಎಪಿಎಂಸಿ ಅಧ್ಯಕ್ಷ ರಮೇಶ್ ಹಾಗೂ ಏಳನೇ ಹೊಸಕೋಟೆ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಅವಲ ಕುಟ್ಟಿ ಉಪಸ್ಥಿತರಿದ್ದರು.