ಕೂಡಿಗೆ, ಮೇ 19: ತಾ. 16 ರಂದು ಕಾಣೆಯಾಗಿದ್ದ ವೃದ್ಧರೊಬ್ಬರು ಶನಿವಾರ ಹಾರಂಗಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ನಿವಾಸಿಯಾದ ಗಣೇಶ್ (65) ಮೃತ ವೃದ್ಧ.
ಮೃತ ವ್ಯಕ್ತಿಯ ಪುತ್ರ ಗಂಗಾಧರ್ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶನಿವಾರ ಹಾರಂಗಿ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯೊಬ್ಬರು ಶವವನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್‍ಗೌಡ, ಎಎಸ್‍ಐ ಭಾರತಿ ಸ್ಥಳಕ್ಕೆ ತೆರಳಿ ಶವದ ಮಹಜರು ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಿದ್ದಾರೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.