ಗುಡ್ಡೆಹೊಸೂರು, ಮೇ 18: ಮಡಿಕೇರಿ ಸಮೀಪದ ಮುತ್ತಾರುಮುಡಿ ಗ್ರಾಮದ ಕುಡೆಕ್ಕಲ್ ಐನ್‍ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ಕೋಲ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಗ್ರಾಮದ ನೂರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಕೋಲ ಕಾರ್ಯಕ್ರಮದಲ್ಲಿ ಸುಳ್ಯದ ಕುಡೆಕ್ಕಲ್ ಕುಟುಂಬದ ಅನೇಕ ಮಂದಿ ಭಾಗವಹಿಸಿದ್ದರು.