ನಾಪೋಕ್ಲು, ಮೇ 19: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ತಾ. 20 ರಂದು (ಇಂದು) ಸಮಾರೋಪಗೊಳ್ಳಲಿದೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏಪ್ರಿಲ್ 15 ರಿಂದ ನಡೆದುಕೊಂಡು ಬರುತ್ತಿದ್ದ ಪಂದ್ಯಾವಳಿಯ ಫೈನಲ್ ಪಂದ್ಯ ತಾ. 20 ರಂದು ಜರುಗಲಿದೆ.ಪ್ರತಿಷ್ಠಿತ ಪ್ರಶಸ್ತಿಯ ಹಾದಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಚೇಂದಂಡ ಹಾಗೂ ಮಾಜಿ ಚಾಂಪಿಯನ್ ಅಂಜಪರವಂಡ ತಂಡಗಳು ಸೆಣಸಲಿವೆ. ಇದಕ್ಕಾಗಿ ಸಂಘಟಕರು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿಜೇತ ಹಾಗೂ ರನ್ನರ್ಸ್ ಪ್ರಶಸ್ತಿ ಪಡೆಯುವ ತಂಡಗಳು ವಿಶೇಷ ರೀತಿಯ ಬಹುಮಾನ ಸೇರಿದಂತೆ ಸಾಧಕರಿಗೆ ಹತ್ತು ಹಲವಾರು ಬಹುಮಾನಗಳು ಕಾದಿವೆ.(ಹಾಕಿ ಉತ್ಸವದ ಇನ್ನಷ್ಟು ವಿವರ ಪುಟ 4ರಲ್ಲಿ)