ಗೋಣಿಕೊಪ್ಪ ವರದಿ, ಮೇ 19: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀ. ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಒಕ್ಕಲಿಗರ ಕ್ರಿಕೆಟ್ ಪಂದ್ಯಾಟದಲ್ಲಿ 8 ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.
ತಿತಿಮತಿ, ಕೋಟೆಕೊಪ್ಪ, ಮೂರ್ನಾಡು ಮೂಲೆ, ಕೋತೂರು ಜೂನಿಯರ್, ಕೂರ್ಗ್ ಬಾಯ್ಸ್, ಮುಳ್ಳುಸೋಗೆ ಕುಶಾಲನಗರ, ನ್ಯಾಶ್ ಕ್ರಿಕೆಟರ್ಸ್ ಸೋಮವಾರಪೇಟೆ, ಕುಡ್ಲೂರು ಗಿರಿ ತಂಡಗಳು ಇಂದು ನಡೆಯುವ ಪಂದÀ್ಯದಲ್ಲಿ ಸೆಣಸಾಟ ನಡೆಸಲಿದೆ
ಉದ್ಘಾಟನೆ: ಜಿಲ್ಲಾ ಒಕ್ಕಲಿಗರ ಕ್ರಿಕೆಟ್ ಪಂದ್ಯಾಟವನ್ನು ಕೆ.ಎನ್. ಗೋಪಾಲಕೃಷ್ಣ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಅತಿಥಿಗಳಾಗಿ ಹಾತೂರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ದೊಡ್ಡಮನೆ ಎ. ಸುಬ್ರಮಣಿ, ಮತ್ತು ವಿ.ಜೆ. ದಿನೇಶ್, ವಿ.ವಿ. ಚಿಕ್ಕಣ್ಣ, ಹಂಚಿನಮನೆ ಸುಜಾತ ಮಹೇಶ್ ಕುಮಾರ್ ಉಪಸ್ಥಿತರಿದ್ದರು.