*ಗೋಣಿಕೊಪ್ಪಲು, ಮೇ 19: ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ಆರಂಭಗೊಂಡಿರುವ 19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ತರಬೇತಿ ಶಿಬಿರದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದ 600 ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದಾರೆ. ಶಿಬಿರದ ಕಮಾಡೆಂಟ್ ಕರ್ನಲ್ ವಿ.ಎಂ. ನಾಯಕ್ ಮ್ಯಾಪ್ ರೀಡಿಂಗ್ ತರಬೇತಿ ನೀಡಿದರು. ಇದರ ಜತೆಗೆ ರೈಫಲ್ ತರಬೇತಿ ಕೂಡ ನಡೆಯಿತು. ಪ್ರತಿ ದಿನ ಬೆಳಿಗ್ಗೆ ಡ್ರಿಲ್, ಸಂಜೆ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಸಮವಸ್ತ್ರದಲ್ಲಿ ಶನಿವಾರ ಬೆಳಿಗ್ಗೆ ಪಟ್ಟಣಕ್ಕೆ ಆಗಮಿಸಿದ ಎನ್ ಸಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣ, ಮಾರುಕಟ್ಟೆ ಬಳಿಗೆ ತೆರಳಿ 2 ಟ್ರ್ಯಾಕ್ಟರ್‍ನಷ್ಟು ಕಸ ಹೆಕ್ಕಿ ಸಂಗ್ರಹಿಸಿದರು. ಆನಂತರ ಬ್ಯಾನರ್ ಹಿಡಿದು ಮುಖ್ಯ ರಸ್ತೆಯಲ್ಲಿ ಸಾಗಿ ಸ್ವಚ್ಛತೆ ಮತ್ತು ಪರಿಸರ ರಕ್ಷಣೆ ಬಗ್ಗೆ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಜತೆ ಕಾಪ್ಸ್‍ನ ಎನ್‍ಸಿಸಿ ಅಧಿಕಾರಿ ಬಿ.ಎಂ. ಗಣೇಶ್, ಕಾವೇರಿ ಕಾಲೇಜಿನ ಎನ್‍ಸಿಸಿ ಅಧಿಕಾರಿ ಬ್ರೈಟ ಕುಮಾರ್, 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಮುಖ್ಯಸ್ಥ ಲೆಫ್ಟಿನೆಂಟ್ ಸಂಜಯ್ ಆಪ್ಟೆ ಮುಂತಾದವರಿದ್ದರು.